

ಇಂದೋರ್: ಆಘಾತಕಾರಿ ಘಟನೆ ಒಂದರಲ್ಲಿ 2 ಸಾವಿರ ರೂ. ಹಣ ಖರ್ಚಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಮೃತರನ್ನು ಬಾಬು ಚೌಧರಿ(50) ಎಂದು ಗುರುತಿಸಲಾಗಿದ್ದು, ಆತನ ಪುತ್ರ ಸೋಹನ್ ಚೌಧರಿ(25)ಯನ್ನು ಪೊಲೀಸರಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತಿಕಾ ವಸಲ್ ವೃತ್ತಿಯಲ್ಲಿ ರೈತರಾಗಿರುವ ಬಾಬು ಚೌಧರಿ ಇಂದೋರ್ಮ ದೇಪಾಲ್ಪುರ ಎಂಬ ಪ್ರದೇಶದಲ್ಲಿ ವಾಸವಿದ್ದರು. ಅವರ ಪುತ್ರ ಸೋಹನ್ ಮಾದಕವ್ಯಸನಿಯಾಗಿದ್ದು, ತಂದೆಯ ಬಳಿ ಖರ್ಚಿಗೆಂದು 2 ಸಾವಿರ ರೂ. ಹಣ ಕೇಳಿದ್ದಾನೆ.
ಹಣ ಕೊಡಲು ನಿರಾಕರಿಸಿದ್ದರಿಂದ ಕುಪಿತಗೊಂಡ ಸೋಹನ್ ಕಲ್ಲಿನಿಂದ ತನ್ನ ತಂದೆಯ ತಲೆಯನ್ನು ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯೂ ಸಂಬಂಧಿಕರೊಬ್ಬರ ಜಮೀನಿನಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತಿಕಾ ವಸಲ್ ತಿಳಿಸಿದ್ದಾರೆ.