

Kill Her Husban: ವ್ಯಕ್ತಿಯೊಬ್ಬನ ಕೈ-ಕಾಲು ಮುರಿದು ಆತನ್ನನ್ನು 11 ಜನ ಸೇರಿ ಜೀವಂತ ಹೂಳುವ ವೇಳೆ ತಪ್ಪಿಸಿಕೊಂಡು ಬಂದು ಜೀವ ಉಳಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೆಲಿ ಪ್ರದೇಶದ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಹೌದು, ವೈದ್ಯರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರಾಜೀವ್ ತಪ್ಪಿಸಿಕೊಂಡ ವ್ಯಕ್ತಿ. ಈತ 2009ರಲ್ಲಿ ಸಾಧನಾ ಎಂಬ ಮಹಿಳೆಯನ್ನು ವಿವಾಹವಾದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಘಟನೆ ಏನು?
ಇದೇ ಜು.21 ರಂದು ರಾತ್ರಿ, ಒಟ್ಟು 11 ಜನರು ರಾಜೀವ್ ಮೇಲೆ ಅವರ ಮನೆಯಲ್ಲಿ ದಾಳಿ ಮಾಡಿದ್ದಾರೆ. ರಾಜೀವ್ ಅವರ ಕೈ ಮತ್ತು ಎರಡೂ ಕಾಲುಗಳನ್ನು ಮುರಿದರು. ಬಳಿಕ ಅವರನ್ನು ಜೀವಂತವಾಗಿ ಹೂಳುವುದು ಫ್ಲ್ಯಾನ್ ಇತ್ತು. 11 ಜನರು ರಾಜೀವ್ ಅವರನ್ನು ಸಿಬಿ ಗಂಜ್ ಪ್ರದೇಶದ ಕಾಡಿಗೆ ಹೊತ್ತುಕೊಂಡು ಹೋಗಿ ಹೂಳಲು ಗುಂಡಿ ತೋಡಿದರು. ಆದರೆ, ವಿಧಿಯಾಟ ಬೇರೆಯಾಗಿತ್ತು. ಅವರನ್ನು ಹೂಳುವ ಮೊದಲು, ಅಪರಿಚಿತನೊಬ್ಬ ಸ್ಥಳಕ್ಕೆ ಬಂದಿದ್ದಾನೆ. ಅಪರಿಚಿತ ಎಲ್ಲರನ್ನು ತರಾಟೆಗೆ ತಗೆದುಕೊಂಡ ಕಾರಣ ಅಲ್ಲಿಂದ ಎಲ್ಲ ಆರೋಪಿಗಳು ಪರಾರಿಯಾಗಿದ್ದಾರೆ.(ಏಜೆನ್ಸೀಸ್)
ರಾಜೀವ್ ನೋವಿನಿಂದ ಬಳಲುತ್ತಿದ್ದರು, ಮೂಳೆಗಳು ಮುರಿದಿದ್ದವು. ಸಹಾಯಕ್ಕಾಗಿ ಕಿರುಚಲು ಅವನಿಗೆ ಕಷ್ಟವಾಗುತ್ತಿತ್ತು. ಹೀಗಾಗಿ, ಅಪರಿಚಿತ ವ್ಯಕ್ತಿ ಅವನನ್ನು ಗಮನಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಸಂತ್ರಸ್ತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದೀಗ ರಾಜೀವ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಜ್ಜತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅವರ ಪತ್ನಿ ಸಾಧನಾ ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ರಾಜೀವ್ ಆರೋಪಿಸಿದ್ದಾರೆ. ಅಲ್ಲದೇ ಪತ್ನಿ ಕೊಲೆ ಸಂಚಿಗೆ ಭಗವಾನ್ ದಾಸ್, ಪ್ರೇಮ್‌ರಾಜ್, ಹರೀಶ್ ಮತ್ತು ಲಕ್ಷ್ಮಣ್ ಸೇರಿದಂತೆ ತನ್ನ ಐದು ಸಹೋದರರನ್ನು ಕೊಲೆ ಮಾಡಲು ಕೆಲವು ಗೂಂಡಾಗಳನ್ನು ನೇಮಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಇನ್ನು ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನಕ್ಕೆ ಕಾರಣ ಏನು? ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.(ಏಜೆನ್ಸೀಸ್)