ಸಾಕಷ್ಟು ದೂರುಗಳು ಬಂದ ಬೆನ್ನಲ್ಲೇ ಪ್ರೇಮಿಗಳಿಗೆ ಶಾಕ್ ನೀಡಿದ ಕಬ್ಬನ್ ಪಾರ್ಕ್ ಆಡಳಿತ ಮಂಡಳಿ!

Cubbon park,
Published on

ಬೆಂಗಳೂರು: ಕಬ್ಬನ್​ ಪಾರ್ಕ್​ನಲ್ಲಿ ಸಮಯ ಕಳೆಯುತ್ತಿದ್ದ ಪ್ರೇಮಿಗಳಿಗೆ ಕಬ್ಬನ್​ ಪಾರ್ಕ್​ ಆಡಳಿತ ಮಂಡಳಿ ಶಾಕ್​ ನೀಡಿದೆ. ಇನ್ನು ಮುಂದೆ ಪ್ರೇಮಿಗಳಿಗೆ ಪಾರ್ಕ್​ನಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ. ಪ್ರೇಮಿಗಳ ಅಸಭ್ಯ ವರ್ತನೆಯ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ಮುಂದೆ ಕಬ್ಬನ್ ಪಾರ್ಕ್​ನಲ್ಲಿ ಲವರ್ಸ್​ ಮನಸ್ಸಿಗೆ ಬಂದಂತೆ ವರ್ತಿಸುವಂತಿಲ್ಲ. ಪ್ರೇಮಿಗಳ ವಿಹಾರ ತಾಣವಾಗಿದ್ದ ಕಬ್ಬನ್ ಪಾರ್ಕ್​ನಲ್ಲಿ ಇನ್ಮುಂದೆ ಪ್ರೇಮಿಗಳಿಗೆ ಕಡಿವಾಣ ಬೀಳಲಿದೆ. ಇಷ್ಟು ದಿನ ಮರದ ಕೆಳಗೆ ಮನದ ಮಾತುಗಳಾಡುತ್ತಿದ್ದ ಪ್ರೇಮಿಗಳಿಗೆ ಆಡಳಿತ ಮಂಡಳಿಯ ನಿರ್ಧಾರ ಶಾಕ್​ ನೀಡಿದೆ.

ಮೈಕ್​​ನಲ್ಲಿ ಘೋಷಣೆ

ಸದ್ಯ ಕಬ್ಬನ್ ಪಾರ್ಕ್​ನಲ್ಲಿ ಅಸಭ್ಯವಾಗಿ ವರ್ತಿಸುವ ಜೋಡಿಗಳ ಮೇಲೆ ಆಡಳಿತ ಮಂಡಳಿ ಕಣ್ಣಿಟ್ಟಿದೆ. ಪಾರ್ಕ್​ನಲ್ಲಿ ಅಸಭ್ಯವಾಗಿ ವರ್ತಿಸದಂತೆ ಮೈಕ್​​ನಲ್ಲಿ ಘೋಷಿಸಲಾಗುತ್ತಿದೆ. ಪಾರ್ಕಿಗೆ ಪ್ರೇಮಿಗಳು ಪ್ರವೇಶಿಸಿದರು ದೂರ ದೂರ ಕುಳಿತು ಮಾತನಾಡಬೇಕಿದೆ.

ಸರಸ ಸಲ್ಲಾಪಕ್ಕೆ ಬ್ರೇಕ್

ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಅಂತ ಕಬ್ಬನ್ ಪಾರ್ಕ್​ಗೆ ಬರುವ ಕುಟುಂಬದವರಿಂದ ಸಾಕಷ್ಟು ದೂರುಗಳು ಬಂದಿವೆ ಮತ್ತು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಪಾರ್ಕಿನಲ್ಲಿ ಪ್ರೇಮಿಗಳ ಸರಸ ಸಲ್ಲಾಪಕ್ಕೆ ಬ್ರೇಕ್ ಹಾಕಲಾಗಿದೆ. ಯಾರು ಕೂಡ ಅಶ್ಲೀಲವಾಗಿ ವರ್ತಿಸಬಾರದು ಎಂದು ಪಾರ್ಕಿನ ಸೆಕ್ಯುರಿಟಿ ಮಂಜುನಾಥ್ ಮೈಕ್​ನಲ್ಲಿ ನಿತ್ಯವು ಘೋಷಣೆ ಕೂಗುತ್ತಿದ್ದಾರೆ.

ಎಚ್ಚರಿಕೆಯ ನಡುವೆಯೂ ಅಸಭ್ಯ ವರ್ತನೆಯಲ್ಲಿ ತೊಡಗಿದರೆ, ಅಂಥವರನ್ನು ಕಬ್ಬನ್ ಪಾರ್ಕ್​ನಿಂದ ಸೆಕ್ಯುರಿಟಿಗಳು ಹೊರಗಡೆ ಕಳಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net