ನಷ್ಟದಲ್ಲಿದ್ದ ಹೆಮ್ಮರಗಾಲ ಪಿಎಸಿಸಿಎಸ್‌ಗೆ ಲಾಭ

ನಷ್ಟದಲ್ಲಿದ್ದ ಹೆಮ್ಮರಗಾಲ ಪಿಎಸಿಸಿಎಸ್‌ಗೆ ಲಾಭ
Published on

ನಂಜನಗೂಡು: ಕಳೆದ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಹೆಮ್ಮರಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಬಾರಿ ರೈತರ ಸಹಕಾರದಿಂದಾಗಿ 1 ಲಕ್ಷ 58 ಸಾವಿರ ರೂ. ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಸೋಮಣ್ಣ ಹೇಳಿದರು.

ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಸಭೆಯನ್ನು ಉಧ್ಘಾಟಿಸಿ ಮಾತನಾಡಿದರು.
ನಮ್ಮ ಸಹಕಾರ ಸಂಘದಿಂದ ಸುಮಾರು 458 ಜನರಿಗೆ ಸುಮಾರು 6 ಕೋಟಿ 12 ಲಕ್ಷ ರೂ. ಸಾಲ ವಿತರಿಸಲಾಗಿದೆ. ಸರ್ಕಾರದ ನೂತನ ಆದೇಶದಂತೆ 5 ಲಕ್ಷ ರೂ. ತನಕ ಬಡ್ಡಿ ರಹಿತವಾಗಿ ರೈತರಿಗೆ ಸಾಲ ವಿತರಿಸಲಾಗುವುದು. ಸುಮಾರು 50 ಸಾವಿರ ರೂ. ತನಕ ಪಶುಸಾಲವೂ ದೊರೆಯಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ಕಾರದಿಂದ ಸಾಲಮನ್ನಾ ಆಗಲಿದೆ ಎಂಬಧೋರಣೆ ಬಿಟ್ಟು ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಆಗ ಸಂಘವು ಲಾಭದಲ್ಲಿ ಮುನ್ನಡೆಯುವ ಜತೆಗೆ ರೈತರಿಗೂ ಅನುಕೂಲ ಆಗಲಿದೆ ಎಂದರು.

ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಕೃಷ್ಣ, ನಿರ್ದೇಶಕರಾದ ಪುಟ್ಟರಾಜನಾಯಕ, ವೃಷಬೇಂದ್ರಪ್ಪ, ಪುಟ್ಟಮಾದಯ್ಯ, ಕೆ.ನಾಗರಾಜು, ಶಿವನಾಗೇಗೌಡ, ಎಚ್.ಎಲ್.ಮಹೇಶ್‌ಕುಮಾರ್, ಮೀನಾಕ್ಷಿ, ಎಂ.ಮಹದೇವು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮುದ್ದು ಮಾದಸ್ವಾಮಿ, ಪ್ರಭುಸ್ವಾಮಿ, ಮಹದೇವನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net