

ಬೆಂಗಳೂರು:
ಶಿವಮೊಗ್ಗದ ಪಿಇಎಸ್ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್‌ನಲ್ಲಿ ಎಂಬಿಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಹೇಮಂತ್ ಕುಮಾರ್ ಎಂ.ಜಿ. ಅವರು ಮಂಗಳೂರಿನ ಶ್ರೀನಿವಾಸ ವಿಶ್ವ ವಿದ್ಯಾಲಯದ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪಿ ಎಚ್ ಡಿ ಪದವಿ ಪಡೆದಿದ್ದಾರೆ.
ಡಾ.ಶೈಲಶ್ರೀ ವಿ.ಟಿ. ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಅರ್ಬನ್ ಸಹಕಾರಿ ಬ್ಯಾಂಕುಗಳ ಹಣಕಾಸು ನಿರ್ವಹಣೆಯ ಮೇಲೆ ಖಜಾನೆ ನಿರ್ವಹಣೆ ಮತ್ತು ಅದರ ಪರಿಣಾಮ ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಿ ಸಲ್ಲಿಸಿದ್ದ ವರದಿಗೆ ಡಾಕ್ಟರೇಟ್ ಸಿಕ್ಕಿದೆ.
ಹೇಮಂತ್ ಕುಮಾರ್ ಅವರು ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ರಾಧಾ ಮತ್ತು ಎಂ.ಆರ್. ಗಂಗಾಧರಪ್ಪನವರ ಪುತ್ರ.