ಚಿತ್ರ ವಿ-ಚಿತ್ರ: 61 ಜನಕ್ಕೆ ವಿಮಾನ ಟಿಕೆಟ್​ನ ನೆರವು

sudina 1
Published on

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ವಿದೇಶಗಳಲ್ಲಿರುವ ಎಷ್ಟೋ ಜನ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಹಣಕಾಸಿನ ಕೊರತೆ ಇದಕ್ಕೆ ಪ್ರಮುಖ ಕಾರಣಗಳಲ್ಲೊದು. ಇಂಥ ಪರಿಸ್ಥಿತಿಯನ್ನರಿತ ಕೇರಳ ಮೂಲದ ದುಬೈವಾಸಿ ಟಿ.ಎನ್. ಕೃಷ್ಣಕುಮಾರ್ ಅವರು 61 ಜನ ಕೇರಳೀಯರು ತಾಯ್ನಾಡಿಗೆ ಮರಳುವುದಕ್ಕೆ ವಿಮಾನದ ಟಿಕೆಟ್ ಕೊಡಿಸಿದ್ದಾರೆ.

ಕಳೆದ ವರ್ಷ ಅಪಘಾತವೊಂದರಲ್ಲಿ ತೀರಿಹೋದ ಮಗನ ಸ್ಮರಣಾರ್ಥ ಈ ಸೇವೆ ಕೈಗೊಂಡಿದ್ದಾರೆ. ‘ನೋವಿನಲ್ಲಿರುವ ಸಾಕಷ್ಟು ಜನ ಇದ್ದಾರೆ. ಇವರಲ್ಲಿ ಹೆಚ್ಚಿನವರು ಕೆಲಸ ಕಳೆದುಕೊಂಡು ಊರಿಗೆ ಮರಳಲು ಹಣವಿಲ್ಲದ ಕಾರ್ವಿುಕರು. ಇಂಥವರು ತಮ್ಮ ಊರುಗಳಿಗೆ ಮರಳಿ ಕುಟುಂಬದವರ ಜತೆ ಸೇರಲಿ ಎಂಬ ಆಶಯದಿಂದ ಈ ಸೇವೆ ಮಾಡಿದ್ದೇನೆ’ ಎನ್ನುತ್ತಾರೆ ಅವರು.

32 ವರ್ಷಗಳಿಂದ ದುಬೈ ವಾಸಿಯಾದ ಅವರು ಅಲ್ಲೂ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net