ಮೈಮುಲ್ ಮಾದರಿ ಮಾಡಲು ಸಹಕರಿಸಿ

ತಿ.ನರಸೀಪುರ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮೈಮೂಲ್ ನೂತನ ಅಧ್ಯಕ್ಷ ಆರ್.ಚೆಲುವರಾಜು ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ತಿ.ನರಸೀಪುರ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮೈಮೂಲ್ ನೂತನ ಅಧ್ಯಕ್ಷ ಆರ್.ಚೆಲುವರಾಜು ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Published on

ತಿ.ನರಸೀಪುರ: ಮೈಸೂರು ಜಿಲ್ಲಾ ಹಾಲು ಒಕ್ಕೂಟವನ್ನು ರಾಜ್ಯದಲ್ಲೇ ಮಾದರಿ ಹಾಲು ಒಕ್ಕೂಟ ಮಾಡುವ ಗುರಿ ಹೊಂದಲಾಗಿದ್ದು ರೈತರು ನನ್ನ ಆಶಯಕ್ಕೆ ಸಹಕಾರ ನೀಡಬೇಕು ಎಂದು ಮೈಮುಲ್ ನೂತನ ಅಧ್ಯಕ್ಷ ಆರ್.ಚೆಲುವರಾಜು ಮನವಿ ಮಾಡಿದರು.

ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಿ.ನರಸೀಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಹೋದ್ಯೋಗಿ ಮಿತ್ರರು ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ. ಇನ್ನೂ 20 ತಿಂಗಳ ಕಾಲಾವಕಾಶವಿದೆ. ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟಿರುವ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಅವರ ನಂಬಿಕೆ ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಜತೆಗೆ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಎಲ್ಲಾ ನಿರ್ದೇಶಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ರಾಜ್ಯದಲ್ಲಿ ದಕ್ಷಿಣ ಕನ್ನಡ ಬಿಟ್ಟರೆ ಹಾಲಿಗೆ ಹೆಚ್ಚಿನ ಬೆಲೆ ನೀಡುತ್ತಿರುವುದು ಮೈಸೂರು ಜಿಲ್ಲಾ ಹಾಲು ಒಕ್ಕೂಟವಾಗಿದ್ದು, ನನ್ನ ಅಧಿಕಾರಾವಧಿಯಲ್ಲಿ ಮೈಮುಲ್ ಅನ್ನು ರಾಜ್ಯದಲ್ಲಿ ಮಾದರಿ ಒಕ್ಕೂಟವನ್ನಾಗಿ ರೂಪಿಸಲಾಗುತ್ತದೆ. ರೈತರಿಗೆ ಹೈನುಗಾರಿಕೆಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಹಾಲಿನ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಮುಲ್ ನಿರ್ದೇಶಕ ಸಿ.ಓಂ.ಪ್ರಕಾಶ್ ಮಾತನಾಡಿ, ಹಾಲು ಸರಬರಾಜು ಮಾಡುವ ರೈತರಿಗೆ ಹಣಕಾಸಿನ ಬಟವಾಡೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಮಾಹಿತಿ ಬಂದಿದ್ದು, ಈ ಸಂಬಂಧ ಒಕ್ಕೂಟದಲ್ಲಿ ಸಭೆ ಸೇರಿ ಹಣಕಾಸು ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ ಹಾಗೂ ಚಾಮುಲ್‌ನ ನಿವೃತ್ತ ವ್ಯವಸ್ಥಾಪಕ ಡಾ.ಕೆ.ಬಿ.ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮೈಮುಲ್ ನಿರ್ದೇಶಕ ಕೆ.ಜಿ.ಮಹೇಶ್, ಕೆ.ಉಮಾಶಂಕರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಲೀಲಾ ನಾಗರಾಜು,ನೀಲಾಂಬಿಕೆ ಮಹೇಶ್, ಬಿ.ಎನ್.ಸದಾನಂದ, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ, ವ್ಯವಸ್ಥಾಪಕ ಎಲ್.ಆರ್.ಕರಿ ಬಸವರಾಜು, ಉಪವ್ಯವಸ್ಥಾಪಕ ಜಿ.ಎನ್.ಸಂತೋಷ್, ಎನ್.ಸೌಮ್ಯಾ, ವಿಸ್ತರಣಾಧಿಕಾರಿ ಆರ್.ಪ್ರಮೋದ್, ಎನ್.ದಿವ್ಯಶ್ರೀ, ಸಿ.ಅನಿತಾ, ಕೆ.ಎನ್.ಶೃತಿ, ಎಸ್.ರಂಜಿತಾ, ಕೇತುಪುರ ಕುಳ್ಳೇಗೌಡ, ಡೇರಿ ಕಾರ್ಯದರ್ಶಿ ಬೆನಕನಹಳ್ಳಿ ಮಾದಪ್ಪ, ಸೋಸಲೆ ನಿಂಗಯ್ಯ, ಕೆ.ಎನ್..ಕುಮಾರ್, ಗುರುಪ್ರಸಾದ್, ಎಂ.ಎಸ್.ರವಿ, ಶಿವಕುಮಾರ್ ಬೋವಿ, ಡೇರಿ ಗುರುಮೂರ್ತಿ, ಮಾದಾಪುರ ಮಹೇಶ್, ಹಿರಿಯೂರು ಸತ್ಯಪ್ಪ, ಕೊಳತ್ತೂರು ಸಿದ್ದರಾಜು, ಮೂಗೂರು ನಾಗೇಂದ್ರ, ಹೆಮ್ಮಿಗೆ ಸೋಮಣ್ಣ, ರಂಗಪ್ಪ, ನಾಗರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net