ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗಿ children

14sgr3
ಸಾಗರದ ಅಣಲೆಕೊಪ್ಪದ ಕೆಳದಿ ರಾಜಗುರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಆರ್.ಶ್ರೀನಿವಾಸ್, ಜಿ.ಬಿ.ಜನಾರ್ದನ್, ಯೋಗೀಶ್, ಅರುಣ್‌ಕುಮಾರ್ ಜೈನ್ ಇತರರಿದ್ದರು.
Published on

ಸಾಗರ: ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಆಗಿದ್ದು, ಅವರ ಮನಸ್ಸು ಅರಿತು ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಬೇಕು ಎಂದು ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಹೇಳಿದರು.

ಸಾಗರದ ಅಣಲೆಕೊಪ್ಪದ ಕೆಳದಿ ರಾಜಗುರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ವೇಷಭೂಷಣ ತೊಡಿಸಿ ನಮ್ಮ ಹಿರಿಯರು, ಸಾಧು-ಸಂತರು, ಪುರಾಣ ಪುರುಷರ ಮಹತ್ವ ತಿಳಿಸುವ ಕೆಲಸ ಮಾಡುತ್ತಿರುವುದು ಅಭಿನಂದಾರ್ಹ. ಪ್ರಾಥಮಿಕ ಹಂತದಲ್ಲಿ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.

ನಾಟ್ಯತರಂಗ ಸಂಸ್ಥೆಯ ವಿದ್ವಾನ್ ಜಿ.ಬಿ.ಜನಾರ್ಧನ್ ಮಾತನಾಡಿ, ಮಕ್ಕಳಿಗೆ ಶಾಲಾಹಂತದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕೃತಿಯ ಅರಿವು ಮೂಡಿಸದೆ ಇದ್ದರೆ ಮಕ್ಕಳು ಬೇರೆ ಸಂಸ್ಕೃತಿಯತ್ತ ಆಕರ್ಷಿತರಾಗುವ ಅಪಾಯ ಇರುತ್ತದೆ. ಎಂದರು.

ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಅವರ ಜನ್ಮದಿನದ ಅಂಗವಾಗಿ ಶ್ರಮಿಕ ವರ್ಗದ ಮೂರ್ತಿ ಮತ್ತು ಕೃಷ್ಣಪ್ಪ ಎಂಬುವವರಿಗೆ ಎರಡು ಸೈಕಲ್ ಉಚಿತವಾಗಿ ನೀಡಲಾಯಿತು. ಪ್ರಮುಖರಾದ ಯೋಗೀಶ್, ಅರುಣಕುಮಾರ್ ಜೈನ್, ಕೆ.ಕೆ.ರಾಘವೇಂದ್ರ, ಪ್ರವೀಣ್, ಪ್ರಕಾಶ್, ನಾಗರಾಜ್, ಸಿಲ್ವನ್, ಅಂಕಿತಾ, ಕೀರ್ತಿ, ಸಹನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net