

ಹೆಬ್ರಿ: ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸೀತಾನದಿ ಗಣಪಯ್ಯ ಶೆಟ್ಟಿ ಕುರಿತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ರಚನೆ ಮಾಡಬೇಕು. ಸಾಹಿತಿ ಅಂಬಾತನಯ ಮುದ್ರಾಡಿ ಹೆಸರಿನಲ್ಲಿ ಮುದ್ರಾಡಿಯ ರಸ್ತೆ ಅಥವ ವೃತ್ತಕ್ಕೆ ಹೆಸರಿಡಬೇಕು ಎಂದು ಸಮ್ಮೇಳನ ಅಧ್ಯಕ್ಷ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಒತ್ತಾಯಿಸಿದರು.
ಹೆಬ್ರಿ ತಾಲೂಕಿನ ಮುದ್ರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ ಶುಕ್ರವಾರ ನಡೆದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷ, ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮುದ್ದೂರು ಶ್ರೀನಿವಾಸ ಭಂಡಾರಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಮತ್ತು ಪತ್ನಿ ವರಲಕ್ಷ್ಮೀ ಭಾರದ್ವಾಜ್, ಸ್ವಾಗತ ಸಮಿತಿಯ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಸಂಚಾಲಕ ಗಣಪತಿ ಮುದ್ರಾಡಿ, ಸಾಹಿತಿ ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.
ಶಾಲೆಗಳಲ್ಲಿ ಇಂದು 5 ಅವಧಿಯ ಕನ್ನಡ ತರಗತಿಯನ್ನು 3 ಅವಧಿಗೆ ಇಳಿಸಲಾಗುತ್ತಿದೆ. ಭವಿಷ್ಯದಲ್ಲಿ ಕನ್ನಡ ಭಾಷೆ ಮೇಲೆ ಪರಿಣಾಮ ಬೀರುತ್ತದೆ. ಶಾಲೆಗಳಲ್ಲಿ ಕನ್ನಡದ ಅವಧಿ ಹೆಚ್ಚಿಸಲು ಧ್ವನಿ ಎತ್ತಿ ಹೋರಾಡಬೇಕಿದೆ ಎಂದು ಕವಿ ಸಾಹಿತಿ ಶ್ರೀ ಮುದ್ರಾಡಿ ಆಗ್ರಹಿಸಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಬ್ರಹ್ಮಣ್ಯ ಶೆಟ್ಟಿ, ಡಾ. ವಾಸುದೇವ ಭಟ್, ರವಿರಾವ್, ಎಚ್ ಗುರುದಾಸ ಶೆಣೈ, ಕೆ ಮಂಜುನಾಥ್, ಇಂದಿರಾ ಬಾಯರಿ, ರಾಘವೇಂದ್ರ ಭಟ್, ಪರಮೇಶ್ವರ ಹೆಬ್ಬಾರ್, ಹರೀಶ್ ಪೂಜಾರಿ, ಮಹೇಶ ನಾಯ್ಕ, ಯೋಗೀಶ್ ಭಟ್, ಪ್ರವೀಣ್ ಕುಮಾರ್, ಮಂಜುನಾಥ ಕೆ, ಸುದೇಶ ಪ್ರಭು, ಎಚ್.ಜನಾರ್ದನ್, ಪ್ರಿತೇಶ್ ಕುಮಾರ್, ಸಮಿತಿಯ ಸದಸ್ಯರು, ಡಾ.ಎಂ.ಎಸ್.ರಾವ್, ಚಂದ್ರಶೇಖರ ಭಟ್, ಶಾಂತಾ ದಿನೇಶ್ ಪೂಜಾರಿ, ಚಂದ್ರಶೇಖರ ಬಾಯರಿ, ಸಂತೋಷ ಕುಮಾರ್ ಶೆಟ್ಟಿ, ಶಶಿಕಲಾ ಡಿ ಪೂಜಾರಿ, ಸುರೇಶ ಶೆಟ್ಟಿಗಾರ್, ಮಂಜುನಾಥ ಹೆಗ್ಡೆ, ಗುರುಪ್ರಸಾದ ಹೆಗ್ಡೆ, ಪರಮೇಶ್ವರ ಹೆಬ್ಬಾರ್, ರಂಜನಿ ಹೆಬ್ಬಾರ್ ಉಪಸ್ಥಿತರಿದ್ದರು.ಗಣಪತಿ ಎಂ ಸ್ವಾಗತಿಸಿದರು. ಪ್ರವೀಣ ಕುಮಾರ್ ವಂದಿಸಿದರು. ಚಂದ್ರಶೇಖರ ಭಟ್ ನಿರೂಪಿಸಿದರು.
ಪ್ರಸಂಗದ ಪ್ರದರ್ಶನದಲ್ಲಿ ಕವಿಯ ಹೆಸರು ಹೇಳಬೇಕು. ಪ್ರಸಂಗ ಬರೆದ ಕವಿಗೆ ಗೌರವ ಸಲ್ಲಬೇಕು. ಆಧುನಿಕ ಕಾಲಕ್ಕೆ ಯಕ್ಷಗಾನವು ಇನ್ನಷ್ಟು ಮಾರ್ಪಾಡು ಆಗಬೇಕು. ವಿಶ್ವವಿದ್ಯಾಲಯದ ಪದವಿ ಪಠ್ಯಗಳಲ್ಲಿ ಛಂದಸ್ಸು ವ್ಯಾಕರಣಗಳನ್ನು ಪ್ರತ್ಯೇಕ ವಿಷಯವಾಗಿ ಬೋಧಿಸುವಂತಾಗಬೇಕು, ಸರ್ಕಾರ ಮತ್ತು ಪ್ರಜ್ಞಾವಂತ ಜನಪ್ರತಿನಿಧಿಗಳು ಪ್ರಯತ್ನಿಸಬೇಕು.- ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಸಮ್ಮೇಳದ ಅಧ್ಯಕ್ಷ