

George Foreman: ಮಾಜಿ ಹೆವಿವೇಯ್ಟ್ ಚಾಂಪಿಯನ್ ಜಾರ್ಜ್ ಫೋರ್‌ಮನ್ ಶುಕ್ರವಾರ ನಿಧನರಾದರು. ಇದನ್ನು ಅವರ ಕುಟುಂಬ ಸದಸ್ಯರು ಇನ್‌ಸ್ಟಾಗ್ರಾಮ್‌ನಲ್ಲಿ ದೃಢಪಡಿಸಿದ್ದಾರೆ.
ಜಾರ್ಜ್ ಫೋರ್‌ಮನ್ ಅವರಿಗೆ 76 ವರ್ಷ. ನಮ್ಮ ಪ್ರೀತಿಯ ಜಾರ್ಜ್ ಎಡ್ವರ್ಡ್ ಫೋರ್‌ಮನ್ ಸೀನಿಯರ್ ಅವರ ನಿಧನವಾಗಿದ್ದಾರೆ ಎಂದು ಹೇಳಲು ತುಂಬಾ ದುಖಃವಾಗುತ್ತಿದೆ. ಮಾರ್ಚ್ 21, 2025 ರಂದು ಅವರು ನಮಗೆ ವಿದಾಯ ಹೇಳಿದರು ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ.
ಫೋರ್‌ಮನ್ ನಿರ್ಭೀತ, ನೇರ ನುಡಿಯ ಬಾಕ್ಸರ್‌ಗಳಲ್ಲಿ ಒಬ್ಬರು. ಅವರ ಹಿಂದಿನ ಪಂದ್ಯಗಳೇ ಇದಕ್ಕೆ ಸಾಕ್ಷಿ. ಫೋರ್‌ಮನ್ 81 ಬಾಕ್ಸಿಂಗ್ ಪಂದ್ಯಗಳಲ್ಲಿ ಹೋರಾಡಿದರು. ಇದರಲ್ಲಿ ಅವರು 76 ಗೆದ್ದರು. ಈ ಪೈಕಿ 68 ಪಂದ್ಯಗಳನ್ನು ಅವರು ನಾಕೌಟ್ ಮೂಲಕ ಗೆದ್ದರು. ಅವರು ಕೇವಲ ಐದು ಪಂದ್ಯಗಳಲ್ಲಿ ಸೋತರು. 1968 ರ ಮೆಕ್ಸಿಕೋ ಒಲಿಂಪಿಕ್ಸ್‌ನಲ್ಲಿ ಫೋರ್‌ಮನ್ ಹೆವಿವೇಯ್ಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ಅಭಿಮಾನಿಗಳ ನೆಚ್ಚಿನ ಬಾಕ್ಸರ್‌ಗಳಲ್ಲಿ ಒಬ್ಬರು.
೧೯೭೩ ರಲ್ಲಿ ಆಗಿನ ಅಜೇಯ ಬಾಕ್ಸರ್ ಜೋ ಫ್ರೇಜಿಯರ್ ಅವರನ್ನು ಸೋಲಿಸುವ ಮೂಲಕ ಫೋರ್‌ಮನ್ ವಿಶ್ವ ಹೆವಿವೇಯ್ಟ್ ಪ್ರಶಸ್ತಿಯನ್ನು ಗೆದ್ದರು. 1974 ರಲ್ಲಿ ಅವರು ರಂಬಲ್ ಇನ್ ದಿ ಜಂಗಲ್ ಪಂದ್ಯದಲ್ಲಿ ಮುಹಮ್ಮದ್ ಅಲಿ ವಿರುದ್ಧ ವೃತ್ತಿಪರ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ರಿಂಗ್‌ನಿಂದ 10 ವರ್ಷಗಳ ಕಾಲ ದೂರವಿದ್ದ ನಂತರ, ಫೋರ್‌ಮನ್ 1994 ರಲ್ಲಿ ಮೈಕೆಲ್ ಮೂರರ್‌ರನ್ನು ಎದುರಿಸಿದರು, ಅವರನ್ನು ಸೋಲಿಸಿದರು ಮತ್ತು ಅವರ ಎರಡೂ ಹೆವಿವೇಯ್ಟ್ ಬೆಲ್ಟ್‌ಗಳನ್ನು ವಶಪಡಿಸಿಕೊಂಡರು. ಫೋರ್‌ಮನ್ (46 ವರ್ಷ, 169 ದಿನಗಳು) ಬಾಕ್ಸಿಂಗ್‌ನಲ್ಲಿ ವಿಶ್ವ ಹೆವಿವೇಯ್ಟ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.