

Heavy snowfall: ಅಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಿಂದಾಗಿ 39 ಜನರು ಮೃತಪಟ್ಟಿದ್ದು, 40 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ಬುಧವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದೇಶದ ಹೆಚ್ಚಿನ ಪ್ರಾಂತ್ಯಗಳಲ್ಲಿ ಹವಾಮಾನ ವೈಪರೀತ್ಯದ ದಿನಗಳು ಬರಗಾಲದ ಪ್ರಭಾವವನ್ನು ಕಡಿಮೆ ಮಾಡಿದ್ದರೂ, ವೈಯಕ್ತಿಕ ಮತ್ತು ಆರ್ಥಿಕ ನಷ್ಟಗಳಿಗೂ ಕಾರಣವಾಗಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಅಬ್ದುಲ್ಲಾ ಜಾನ್ ಸೈಕ್ ಹೇಳಿದ್ದಾರೆ.
ಈ ಘಟನೆಯಲ್ಲಿ 240 ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 61 ಭಾಗಶ: ಹಾನಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ''ಪೀಡಿತ ಪ್ರದೇಶಗಳಿಗೆ ಸಮೀಕ್ಷಾ ತಂಡಗಳನ್ನು ಕಳುಹಿಸಲಾಗಿದೆ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ ಸಮೀಕ್ಷೆ ಮುಂದುವರೆದಿದೆ" ಎಂದು ಹೇಳಿದರು.(ಏಜೆನ್ಸೀಸ್)