

ಬೆಂಗಳೂರು:
ಮಳೆಯಿಂದ ಹಾನಿಯಾದ ರಸ್ತೆಗಳ ರಿಪೇರಿಯನ್ನ ಇಂದಿನಿಂದಲೇ ಆರಂಭಿಸುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಶೂನ್ಯವೇಳೆಯಲ್ಲಿ ಡಾ.ಧನಂಜೇಯ ಅವರ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ, ವಿದ್ಯುತ್ ಕಂಬಗಳ ದುರಸ್ತಿಗೆ ಸಿಎಂ ಸೂಚಿಸಿದ್ದಾರೆ ಎಂದರು.
ಶಿರಾ ನಗರಸಭೆಯಲ್ಲಿ ಲಂಚಾವತಾರ
ಸಾರ್ವಜನಿಕ ಇ ಖಾತಾ ಮಾಡಿಕೊಡಲು 10 ಸಾವಿರ ರೂ ಶಿರಾ ನಗರಸಭೆಯ ಅಧಿಕಾರಿಗಳು ಪಡೆಯುತ್ತಾರೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಬಿಜೆಪಿಯ ಚಿದಾನಂದ ಗೌಡ ಸದನದ ಗಮನ ಸೆಳೆದರು.
ಸಚಿವ ರಹೀಂಖಾನ್ ಉತ್ತರಿಸಿ, ಈ ಬಗ್ಗೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಭರವಸೆ ನೀಡಿದರು.