ರಾಜಧಾನಿಯಲ್ಲಿ 2 ದಿನ ಜೋರು ಮಳೆ: ಯೆಲ್ಲೋ ಅಲರ್ಟ್ ಎಚ್ಚರಿಕೆ- Heavy rain in bangalore

ಈ ಬಾರಿಯ ಪ್ರಸಕ್ತ ಮುಂಗಾರಿನಲ್ಲಿ ರಾಜಧಾನಿಗೆ ಶೇ.36 ಮಳೆ ಕೊರತೆಯಾಗಿದೆ. ಜೂ 1ರಿಂದ ಸೆ.30ರವರೆಗೆ ವಾಡಿಕೆಯಂತೆ 470 ಮಿಮೀ ಮಳೆಯಾಗುವ ಬದಲು 302 ಮಿಮೀ ಸುರಿದಿದ್ದು, ಶೇ.36 ಮಳೆ ಅಭಾವವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಳೆ
ಬೆಂಗಳೂರಲ್ಲಿ ಸಾಧಾರಣ ಮಳೆ
Published on: 

ಬೆಂಗಳೂರು: (Heavy rain in bangalore)ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿ ಪರಿಣಾಮ ನಗರದಲ್ಲಿ ಸುರಿಯುತ್ತಿರುವ ಮಳೆ, ಮುಂದಿನ 2 ದಿನ ಬಿರುಗಾಳಿಯೊಂದಿಗೆ ರಭಸವಾಗಿ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

ನಗರದ ಹಲವೆಡೆ ಬುಧವಾರವೂ ಗುಡುಗು ಸಹಿತ ಸಾಧಾರಣ ಮಳೆಯಾಯಿತು. ಕೆಲವೆಡೆ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಪರದಾಡಿದರು. ಅಂಡರ್‌ಪಾಸ್, ಜಂಕ್ಷನ್‌ಗಳಲ್ಲಿ ನೀರು ನಿಂತಿತ್ತು. ರಸ್ತೆಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು.

ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ ಮತ್ತು ಬಸವನಗುಡಿ ಸೇರಿ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಯಿತು.ಕಂಟೋನ್ಮೆಂಟ್ ಸುತ್ತಮುತ್ತ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಕೆ.ಆರ್. ವೃತ್ತ, ಮೈಸೂರು ರಸ್ತೆ, ತುಮಕೂರು ರಸ್ತೆ, ಏರ್‌ಪೋರ್ಟ್ ರಸ್ತೆ, ವೈಟ್‌ಫೀಲ್ಡ್, ಹೊಸೂರು ರಸ್ತೆ, ಕೆ.ಆರ್. ಪುರ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರು ಸಂಚಾರ ಸಿಕ್ಕಿನಲ್ಲಿ ಸಿಲುಕಿದ್ದರು.ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿ ಸುರಿಯುತ್ತಿರುವ ಮಳೆಯಿಂದ ನಗರದ ಹಲವು ರಸ್ತೆಗಳು ಜಲಾವೃತವಾಗಿವೆ.

Also Read
ಹಣ ಬಿಡಗಡೆ ಮಾಡದಿದ್ದರೆ ಲಂಚ ತಿಂದವರ ಹೆಸರು ಬಹಿರಂಗ: ಸರ್ಕಾರಕ್ಕೆ ನವೆಂಬರ್ ಡೆಡ್‌ಲೈನ್ ಕೊಟ್ಟ ಗುತ್ತಿಗೆದಾರರು- contractor
ಮಳೆ

ರಾಜಧಾನಿಗೆ ಶೇ.36 ಮಳೆ ಅಭಾವ:

ಈ ಬಾರಿಯ ಪ್ರಸಕ್ತ ಮುಂಗಾರಿನಲ್ಲಿ ರಾಜಧಾನಿಗೆ ಶೇ.36 ಮಳೆ ಕೊರತೆಯಾಗಿದೆ. ಜೂ 1ರಿಂದ ಸೆ.30ರವರೆಗೆ ವಾಡಿಕೆಯಂತೆ 470 ಮಿಮೀ ಮಳೆಯಾಗುವ ಬದಲು 302 ಮಿಮೀ ಸುರಿದಿದ್ದು, ಶೇ.36 ಮಳೆ ಅಭಾವವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ಇಡೀ ದಕ್ಷಿಣ ಭಾರತದ ಮೇಲೆ ತೇವಾಂಶಭರಿತ ಮಳೆ ಮೋಡಗಳು ಹಬ್ಬಿಸಿದೆ. ಹಗಲಿನಲ್ಲಿ ಪಶ್ಚಿಮಘಟ್ಟಗಳ ಮೇಲೆ ಸೂರ್ಯನ ತಾಪದಿಂದ ಮೋಡಗಳು ಸೃಷ್ಟಿಯಾಗಿ ಅವು ನಿಧಾನವಾಗಿ ಪೂರ್ವದತ್ತ ಚಲಿಸಿ ರಾತ್ರಿ ವೇಳೆಗೆ ಬೆಂಗಳೂರು ತಲುಪಲಿವೆ. ರಾತ್ರಿ ವಾತಾವರಣ ತಂಪಾಗುತ್ತಿದ್ದಂತೆ ನೆಲಮಟ್ಟದ ಗಾಳಿ ಬಲಗೊಂಡು, ತೇವಾಂಶ ತುಂಬಿದ ವಾತಾವರಣದಲ್ಲಿ ಮಳೆಯ ಮೋಡಗಳು ಸಕ್ರಿಯಗೊಳ್ಳುತ್ತದೆ. ಇದರಿಂದ 3 ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಅಥವಾ ಮುಂಜಾನೆ ಮಳೆ ಸುರಿಯಲು ಕಾರಣವಾಗಿದೆ.

-ಸಿ.ಎಸ್.ಪಾಟೀಲ್, ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net