

Heavy Rain In Pakistan: ಪಾಕಿಸ್ತಾನದ ಪಂಜಾಬ್(Panjab) ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಗೆ 9 ಮಂದಿ ಮೃತಪಟ್ಟಿದ್ದು, 92 ಜನರಿಗೆ ಗಾಯಗಳಾಗಿವೆ ಎಂದು ಬುಧವಾರ(ಜು.16) ವರದಿಯಾಗಿದೆ.
ಪಾಕಿಸ್ತಾನದ ಬಹಾವಲ್ (Bahawal) ನಗರದಲ್ಲಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, 17 ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಒಕಾರಾ (Okara) ಪ್ರಾಂತ್ಯದಲ್ಲಿಯೂ ಕೂಡ ಓರ್ವ ಯುವತಿ ಸೇರಿದಂತೆ, ಇಬ್ಬರು ಹರಿಹರೆಯದವರು ಮೃತರಾಗಿದ್ದು, 12 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ರಾಜಧಾನಿ ಲಾಹೋರ್(Lahore) ನಲ್ಲಿಯೂ 3 ಜನ ಮೃತಪಟ್ಟಿದ್ದು, 8 ಮಂದಿಗೆ ಗಾಯಗಳಾಗಿವೆ ಎಂದು ವರದಿ ಉಲ್ಲೇಖಿಸಿದೆ.
ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಾಂತೀಯ ವಿಪತ್ತು ನರ್ವಹಣಾ ಪ್ರಾಧಿಕಾರ(PDMA) ಮುನ್ಸೂಚನೆ ನೀಡಿದೆ.(ಏಜೆನ್ಸೀಸ್)