ಮೈಸೂರಿನಲ್ಲಿ ಧಾರಾಕಾರ ಮಳೆ

ಮೈಸೂರಿನಲ್ಲಿ ಬುಧವಾರ ಭಾರಿ ಮಳೆ ಸುರಿಯಿತು
ಮೈಸೂರಿನಲ್ಲಿ ಬುಧವಾರ ಭಾರಿ ಮಳೆ ಸುರಿಯಿತು
Published on
ಮೈಸೂರು: ಬಿಸಿಲಿನ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ನಗರದ ಜನತೆಗೆ ಬುಧವಾರ ಸುರಿದ ಧಾರಾಕಾರ ಮಳೆಯು ತಂಪೆರೆ ಯಿತು. ಗುಡುಗು, ಮಿಂಚಿನೊಂದಿಗೆ ಅರ್ಧ ಗಂಟೆ ಕಾಲ ಮಳೆ ಆರ್ಭಟಿಸಿತು. ಜಿಲ್ಲೆಯಲ್ಲಿ ಮಾ.22ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಮಧ್ಯಾಹ್ನ 3ಕ್ಕೆ ದಟ್ಟವಾದ ಮೋಡ ಕವಿದುಕೊಳ್ಳಲು ಪ್ರಾರಂಭಿಸಿತು. ಹಗಲಿನಲ್ಲೂ ವಿದ್ಯುತ್ ದೀಪ ಬೆಳಗುವಷ್ಟರ ಮಟ್ಟಿಗೆ ಮೋಡ ಆವರಿಸಿತು. ಸಂಜೆ 4.30 ರಿಂದ 5ರವರೆಗೆ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿಯಿತು. ಧಾರಾಕಾರ ಮಳೆಯಿಂದ ಜನರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡಿದರು. ಭಾರಿ ಮಳೆಯಿಂದ ನಗರದ ರಸ್ತೆಗಳಲ್ಲಿ ನೀರು ನದಿಯ ರೀತಿಯಲ್ಲಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ಮಳೆ ನಿಂತ ನಂತರ ದಿಢೀರಾಗಿ ಬಿಸಿಲಿನ ವಾತಾವರಣ ಕಾಣಿಸಿಕೊಂಡಿತು. ಧಾರಾಕಾರ ಮಳೆಯಿಂದ ನಗರದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣಗೊಂಡಿದೆ.
ಮುಂದುವರೆಯಲಿದೆ ಮಳೆ: ಜಿಲ್ಲೆಯಲ್ಲಿ ಮಾ.22ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ. ಮಾ.19 ರಂದು 3 ಮಿ.ಮೀ., 20 ರಂದು 4 ಮಿ.ಮೀ., 21 ಮತ್ತು 22 ರಂದು ತಲಾ 3 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ 17 ರಿಂದ 18, ಗರಿಷ್ಠ 34 ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ಗಾಳಿಯು ಗಂಟೆಗೆ 4 ರಿಂದ 6 ಕಿ.ಮೀ. ವೇಗದಲ್ಲಿ ಬೀಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net