ಬೆಂಗಳೂರಲ್ಲಿ ಮಳೆ ಅಬ್ಬರ; ಕೆರೆಯಂತಾದ ಪಣತ್ತೂರು ಅಂಡರ್‌ಪಾಸ್! ಹೈರಾಣಾದ ವಾಹನ ಸವಾರರು | Bangalore Rain

ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಪಣತ್ತೂರು ರೈಲ್ವೆ ಅಂಡರ್‌ಪಾಸ್‌ ಜಲಾವೃತಗೊಂಡಿದೆ. ನೀರಿನಲ್ಲಿ ಕಾರೊಂದು ಸಿಲುಕಿದ್ದು, ಬಾಲಗೆರೆ ಮತ್ತು ವಿಬ್‌ಗ್ಯಾರ್ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
Panathur underpass in Bangalore is flooded
ಬೆಂಗಳೂರಲ್ಲಿ ಭಾರೀ ಮಳೆಗೆ ಪಣತ್ತೂರು ರೈಲ್ವೆ ಅಂಡರ್‌ಪಾಸ್‌ ಜಲಾವೃತ
Published on: 

Panathur Underpass: ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಪಣತ್ತೂರು ರೈಲ್ವೆ ಅಂಡರ್‌ಪಾಸ್‌ ಸಂಪೂರ್ಣ ಜಲಾವೃತಗೊಂಡಿದೆ. ಅಂಡರ್‌ಪಾಸ್‌ ಕೆರೆಯಂತಾಗಿದ್ದು, ಬಿಳಿ ಬಣ್ಣದ ಕಾರೊಂದು ನೀರಿನಲ್ಲಿ ಸಿಲುಕಿದೆ. ಇದರಿಂದ ಬಾಲಗೆರೆ, ಗುಂಜೂರು, ವರ್ತೂರು ಹಾಗೂ ಔಟರ್ ರಿಂಗ್ ರೋಡ್‌ ಕಡೆ ಹೋಗುವ ವಾಹನ ಸವಾರರು ಪರದಾಡುವಂತಾಗಿದೆ.

ಪಣತ್ತೂರು ಅಂಡರ್‌ಪಾಸ್‌ ಮಾತ್ರವಲ್ಲ, ವಿಬ್‌ಗ್ಯಾರ್ ರಸ್ತೆ ಮತ್ತು ಬಾಲಗೆರೆ ಮುಖ್ಯರಸ್ತೆಯಲ್ಲೂ ನೀರು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ವೈಟ್‌ಟಾಪಿಂಗ್ ಕಾಮಗಾರಿಗಳಿಂದ ಟ್ರಾಫಿಕ್ ಜಾಮ್‌ ಕೂಡ ಹೆಚ್ಚಾಗಿದೆ.

ಹತ್ತು ವರ್ಷವಾದರೂ ಸಮಸ್ಯೆಗೆ ಪರಿಹಾರವಿಲ್ಲ

ಪಣತ್ತೂರು ಅಂಡರ್‌ಪಾಸ್‌ನಲ್ಲಿ ಮಳೆ ಬಂದಾಗ ನೀರು ನಿಲ್ಲೋದು ಇವತ್ತಿನ ಸಮಸ್ಯೆಯಲ್ಲ. ಸ್ಥಳೀಯರು ಸುಮಾರು ಹತ್ತು ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ನೀರು ಹರಿದುಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರೋದೇ ಇದಕ್ಕೆ ಕಾರಣ ಅಂತ ಸ್ಥಳೀಯರು ದೂರಿದ್ದಾರೆ. ಪ್ರತಿ ಮಳೆಗೂ ಇದೇ ಗೋಳು ಮುಂದುವರಿದಿದ್ದು, ಶಾಶ್ವತ ಪರಿಹಾರ ಸಿಗದಿರೋದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವನ್ಯಜೀವಿಗಳನ್ನ ಕಾಪಾಡೋಕೆ ಮನುಷ್ಯರ ಹಸ್ತಕ್ಷೇಪ ಬೇಕಾ? | Wildlife conservation

ಈ ರಸ್ತೆಯಲ್ಲಿ ಹೋಗೋ ಮುನ್ನ ಹುಷಾರ್‌

ಪಣತ್ತೂರು ಅಂಡರ್‌ಪಾಸ್‌ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಸಾಧ್ಯವಾದಷ್ಟು ಈ ಮಾರ್ಗದಲ್ಲಿ ಹೋಗೋದನ್ನ ತಪ್ಪಿಸಿ, ಬೇರೆ ರಸ್ತೆಗಳಲ್ಲಿ ಹೋಗೋದು ಉತ್ತಮ. ಮನೆಯಿಂದ ಹೊರಡುವ ಮುನ್ನ ಟ್ರಾಫಿಕ್ ಅಪ್‌ಡೇಟ್‌ ಚೆಕ್ ಮಾಡಿಕೊಂಡು ಹೊರಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net