ಜಮ್ಮುವಿನಲ್ಲಿ ಭಾರಿ ಮಳೆ ಮುನ್ಸೂಚನೆ; ಅ. 6 ಮತ್ತು 7ರಂದು ಶಾಲೆಗಳಿಗೆ ರಜೆ ಘೋಷಣೆ| Rain Alert

Untitled design - 2025-10-05T212918.534
Published on

Rain Alert: ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂಬ ಭಾರತೀಯ ಹವಾಮಾನ ಇಲಾಖೆ(ಐಎಂಡಿ)  ಮುನ್ಸೂಚನೆ ಹಿನ್ನೆಲೆ ಜಮ್ಮುವಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ನಾಳೆ ಮತ್ತು ನಾಡಿದ್ದು (ಅ. 06 & 07) ರಜೆ ಘೋಷಣೆ ಮಾಡಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಭಾನುವಾರ(ಅ. 05) ಆದೇಶ ಹೊರಡಿಸಿದೆ.

ಇತ್ತೀಚೆಗೆ ಜಮ್ಮು-ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಸಾವು ನೋವು ಸಂಭವಿಸಿದ್ದು, ಆಸ್ತಿ ನಷ್ಟವುಂಟಾಗಿತ್ತು. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಮಳೆಯಿಂದ ರಾಜೌರಿಯಲ್ಲಿ ಹಲವಾರು ಮನೆಗಳು, ರಸ್ತೆಗಳು ಮತ್ತು ಕೃಷಿಭೂಮಿಗಳು ಹಾನಿಗೊಳಗಾಗಿದ್ದರೆ, ಭೂಕುಸಿತದಿಂದ ಹಲವು ಪ್ರಮುಖ ಮಾರ್ಗಗಳ ರಸ್ತೆಗಳು ಬಂದ್ ಆಗಿವೆ.

ಉಧಂಪುರದ ಬಂಟ್ ಗ್ರಾಮದಲ್ಲಿ ಮಳೆಯಿಂದ ಒಂದು ಪ್ರಮುಖ ಸೇತುವೆ ಕೊಚ್ಚಿಹೋಗಿದ್ದು, ಸಂಚಾರ ಕಡಿತಗೊಂಡು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಏತನ್ಮಧ್ಯೆ, ಜನಪ್ರಿಯ ಪ್ರವಾಸಿ ತಾಣವಾದ ಭದೇರ್ವಾ, ದಿಢೀರ್ ಪ್ರವಾಹ, ಮೇಘಸ್ಫೋಟ ಹಾಗೂ ಇತ್ತೀಚಿನ ಉಗ್ರಗಾಮಿ ಸಂಬಂಧಿತ ಘಟನೆಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಕಂಡಿದೆ. ಪ್ರವಾಸೋದ್ಯಮವನ್ನೇ ಜೀವನೋಪಾಯವಾಗಿ ಅವಲಂಬಿಸಿರುವ ಸ್ಥಳೀಯ ನಿವಾಸಿಗಳು ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net