ಈ ರಾಜ್ಯದ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​! ಕಡಲ ತೀರದಲ್ಲಿ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ | Rain Alert

ವಿಜಯವಾಣಿ - 2024-11-26T164234.316
Published on

ತಿರುವನಂತಪುರಂ: ಮುಂದಿನ ಮೂರು ದಿನಗಳ ಕಾಲ ಕೇರಳದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದು (ನ.26) ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ನ.27 ಮತ್ತು 28ರಂದು ಇಡುಕ್ಕಿ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Rain Alert) ಘೋಷಿಸಲಾಗಿದೆ.

24 ಗಂಟೆಗಳಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ಮಳೆಯಾಗಿದ್ದು, ದಕ್ಷಿಣ ಕೇರಳ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿಮೀ ವೇಗದಲ್ಲಿ ಮತ್ತು ಕೆಲವೊಮ್ಮೆ 55 ಕಿಮೀ ವೇಗದಲ್ಲಿ ಬಲವಾದ ಗಾಳಿ ಮತ್ತು ವಿಪರೀತ ಹವಾಮಾನದ ಸಾಧ್ಯತೆಯಿರುವ ಹಿನ್ನಲೆ 29ರವರೆಗೆ ಮೀನುಗಾರಿಕೆಗೆ ಹೋಗಬೇಡಿ ಎಂದು ಐಎಂಡಿ ಎಚ್ಚರಿಸಿದೆ. ಮುಂದಿನ 24 ಗಂಟೆಗಳಲ್ಲಿ 7ರಿಂದ 11 ಸೆಂ.ಮೀ ಮಳೆಯಾಗಲಿದೆ. ಸನ್ನಿಧಾನಂ, ಪಂಪಾ ಮತ್ತು ನಿಲಕ್ಕಲ್ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮೀನುಗಾರಿಕೆ ಚಟುವಟಿಕೆಗೆ ನಿಷೇಧ

ಗಂಟೆಗೆ 35-45 ಕಿಮೀನಿಂದ 55 ಕಿಮೀ ವೇಗದಲ್ಲಿ ಬಲವಾದ ಗಾಳಿಯ ಸಾಧ್ಯತೆಯ ಕಾರಣ, ದಕ್ಷಿಣ ಕೇರಳ ಕರಾವಳಿಯಲ್ಲಿ ನವೆಂಬರ್ 29ರವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net