ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ; ಓರ್ವ ರೈತ ಮೃತ್ಯು

haily
Published on

ಬೀದರ್ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅಲ್ಲಿಕಲ್ಲು ಮಳೆಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಓರ್ವ ರೈತ ಬಲಿಯಾಗಿದ್ದಾನೆ.

ಮಾಧರಾವ ಬೀರ್ಗೆ ( 37) ಮೃತ. ಈತ ಕಮಲನಗರ ತಾಲ್ಲೂಕಿನ ಸೋನಾಳ ಗ್ರಾಮದ ನಿವಾಸಿಯಾಗಿದ್ದಾನೆ. ಮಳೆಯ ಆರ್ಭಟದ ಮಧ್ಯ ರೈತನೋರ್ವ ಸಿಡಿಲಿಗೆ ಬಲಿಯಾಗಿದ್ದಾನೆ.

ಅಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಬೀದರ ಜಿಲ್ಲೆಯಾದ್ಯಂತ ಹಲವು ಅವಾಂತರ ಸೃಷ್ಟಿಯಾಗಿದೆ. ಭಾಲ್ಕಿಯ ಕೂಡಲಿಯಲ್ಲಿ ಗಾಳಿ-ಮಳೆಗೆ ಕೋಳಿ ಫಾರ್ಮ್ ತಗಡು ಹಾರಿಗೋಗಿದ್ದು, ಸಾವಿರಾರು ಕೋಳಿಗಳ ಮಾರಣಹೋಮ ನಡೆದಿದೆ.

ಕಳೆದ ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯಿಂದ ಬೀದಿ ವ್ಯಾಪಾರಿಗಳ ಬದುಕು ಅಸ್ಥವ್ಯಸ್ಥಗೊಂಡಿದ್ದು, ಗಾಳಿ, ಮಳೆ ಜತೆಗೆ ಆಲಿಕಲ್ಲು ಬಿದ್ದಿರುವ ಹಿನ್ನೆಲೆ ರೈತರು ಬೆಳೆದಿರುವ ಜೋಳ, ಮಾವು ನೆಲಕಚ್ಚಿವೆ. ಹೀಗಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net