ಬೊಮ್ಮಾಯಿ, ಬಿಎಸ್​ವೈ ಹೇಳಿದರೆ ಚುನಾವಣೆಯಲ್ಲಿ ಸ್ಪರ್ಧೆ, ಇಲ್ಲವಾದರೆ ನಾನು ಸ್ಪರ್ಧೆ ಮಾಡಲ್ಲ: ಎಮ್​ಪಿ ರೇಣುಕಾಚಾರ್ಯ

mp renukacharya
Published on

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಹೇಳಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ ನಾನು ಚುನಾವಣೆ ಸ್ಪರ್ಧೆ ಮಾಡಲ್ಲ ಎಂದು ಹೊನ್ನಾಳಿಯ ಬಿಜೆಪಿ ಶಾಸಕ ಎಮ್​ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ತಂದೆ ಸಮಾನರಾದ ಯಡಿಯೂರಪ್ಪನವರು ಬೊಮ್ಮಾಯಿ ಅಣ್ಣನ ಸಮಾನರಾಗಿದ್ದಾರೆ. ಬೊಮ್ಮಾಯಿ-ಯಡಿಯೂರಪ್ಪ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಸುಮಾರು 4500 ಕೋಟಿ ಅನುಧಾನ ಕೊಟ್ಟಿದ್ದಾರೆ ಅವರಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದು ಹೇಳುತ್ತಾ ಹಾಡಿಹೊಗಳಿದ್ದಾರೆ.

ನನ್ನ ಪ್ರಾಣ ಹೋದರು ಚಿಂತೆಯಿಲ್ಲ ಅಂತ ಕೋವಿಡ್ ಸೆಂಟರ್​ನಲ್ಲಿಯೇ ಇದ್ದು ಸೇವೆ ಮಾಡಿದ್ದೇನೆ. ನನ್ನ ಜನರಿಗೆ ಸಮಸ್ಯೆ ಆಗಬಾರದು ಅಂತ ಹಗಲಿರುಳ ಕೆಲಸ ಮಾಡಿದ್ದೇನೆ. ನಾನು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬೊಮ್ಮಾಯಿ ಮತ್ತು ಬಿಎಸ್​ವೈ ಅವರು ನನ್ನ ತಂದೆ ಮತ್ತು ಅಣ್ಣನ ಜಾಗದಲ್ಲಿದ್ದಾರೆ. ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರೆಂದು ರೇಣುಕಾಚಾರ್ಯ ಅಬ್ಬರದ ಭಾಷಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net