ಹೃದಯದ ಆರೋಗ್ಯ ನಿರ್ಲಕ್ಷೃ ಸಲ್ಲ

tgt health
ನೀಚಡಿಯಲ್ಲಿ ಆಯೋಜಿಸಿದ್ದ ಹೃದಯ ತಪಾಸಣಾ ಶಿಬಿರವನ್ನು ಚೆನ್ನೈನ ಹೆಲ್ತ್‌ಕೇರ್ ಸಂಸ್ಥೆಯ ಡಾ. ರಾಕೇಶ್ ಕೃಷ್ಣ ಉದ್ಘಾಟಿಸಿದರು. ಮಾಧವ ಕೃಷ್ಣ ಭಟ್, ಎನ್.ಎ.ನಾರಾಯಣಮೂರ್ತಿ, ಬಿ.ಜಿ.ಅನಂತಮೂರ್ತಿ ಇತರರಿದ್ದರು.
Published on

ತ್ಯಾಗರ್ತಿ: ದೇಶದಲ್ಲಿ ವೈದ್ಯಕೀಯ ಮಾಹಿತಿ ಪ್ರಕಾರ 2024ರಲ್ಲಿ 38 ಲಕ್ಷ ಜನ 25ರಿಂದ 40 ವರ್ಷದೊಳಗಿನ ಯುವಕರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ಯಾರೂ ನಿರ್ಲಕ್ಷ್ಯ ಮಾಡದೆ ಹೃದಯದ ಆರೋಗ್ಯದ ಕಾಳಜಿ ಹೊಂದಿರಬೇಕು ಎಂದು ಚೆನ್ನೈನ ಮಾನ್ವಿತಾ ಹೆಲ್ತ್ಕೇರ್ ಸಂಸ್ಥೆಯ ಮುಖ್ಯಸ್ಥ ಮಾಧವ ಕೃಷ್ಣ ಭಟ್ ಹೇಳಿದರು.

ನೀಚಡಿ ಗ್ರಾಮದ ಲಕ್ಷ್ಮೀನಾರಾಯಣ ದೇವರ ಸಭಾಭವನದಲ್ಲಿ ಭಾನುವಾರ ನೀಚಡಿ ಟ್ರಸ್ಟ್, ಗ್ರಾಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಹೃದಯ ತಪಾಸಣಾ ಉಚಿತ ಶಿಬಿರದಲ್ಲಿ ಮಾತನಾಡಿದರು.

ಕಳೆದ ಎಂಟು ವರ್ಷಗಳಿಂದ ನಮ್ಮ ಸಂಸ್ಥೆಯಿಂದ ಆಧುನಿಕ ಪೋರ್ಟಬಲ್ ಇಸಿಜಿ ಯಂತ್ರದ ಸಹಾಯದಿಂದ ಹಳ್ಳಿಯ ಜನರಿಗೆ ಹೃದಯದ ಆರೋಗ್ಯ ತಪಾಸಣೆ ಮಾಡಿಸಿ, ಆರೋಗ್ಯ ಅರಿವು ಮೂಡಿಸುತ್ತಿದ್ದೇವೆ. ಬಿ.ಪಿ, ಶುಗರ್ ಇರುವವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದರಿಂದ ತೊಂದರೆ ಅನುಭವಿಸುವಂತಾಗಿದೆ. 24 ಗಂಟೆ ಕಾರ್ಯ ನಿರ್ವಹಿಸುವ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಡಾ. ರಾಕೇಶ್ ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. 155 ಜನರಿಗೆ ತಪಾಸಣೆ ನಡೆಸಲಾಯಿತು. ನೀಚಡಿ ಟ್ರಸ್ಟ್ ಅಧ್ಯಕ್ಷ ಶಿವಪ್ರಕಾಶ್ ಶಾಸ್ತ್ರಿ, ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎ.ನಾರಾಯಣಮೂರ್ತಿ, ನಿವೃತ್ತ ಉಪನ್ಯಾಸಕ ಕೆ.ಜಿ.ಮಂಜುನಾಥ ಕೆಳಮನೆ, ಗ್ರಾಮಸ್ಥರಾದ ಬಿ.ಜಿ.ಅನಂತಮೂರ್ತಿ, ಎನ್.ಎ.ದತ್ತಮೂರ್ತಿ, ಎನ್.ಟಿ.ಯೋಗೀಶ್, ಶ್ರೀನಾಥ್ ನಾಡಿಗ್, ಪ್ರಶಾಂತ್ ಭಾಗವತ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net