ಶಿವಲಿಂಗಕ್ಕೆ ಅಭಿಷೇಕ ಮಾಡುವಾಗಲೇ Heart Attack ಆಗಿ ವ್ಯಕ್ತಿ ಸಾವು; ಆಘಾತಕಾರಿ Video Viral

Heart Attack
Published on

ಅಹಮದಾಬಾದ್​: ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಖಾಯಿಲಗೆಳು (Heart Related Issues) ಜನರನ್ನು ಹೆಚ್ಚು ಬಾಧಿಸುತ್ತಿದ್ದು, ಯುವಕರು ಹಾಗೂ ಹಿರಿಯರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಆಘಾತಕಾರಿ ಘಟನೆಯೊಂದರಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ನವೆಂಬರ್​ 19ರಂದು ಗುಜರಾತ್​ನ ವಲ್ಸಾದ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಕಿಶೋರ್​ ಭಾಯ್​ ಪಟೇಲ್​ ಎಂದು ಗುರುತಿಸಲಾಗಿದೆ. ಪರ್ನೇರಾ ಡಂಗೂರ್‌ನಲ್ಲಿರುವ ಮಹಾದೇವ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ದೇವಾಲಯದಲ್ಲಿ ಅಭಿಷೇಕ ನಡೆಯುವಾಗ ಭಕ್ತರೊಂದಿಗೆ ನಿಂತಿರುವ ವ್ಯಕ್ತಿಯು ಅ ಬಳಿಕ ದೇವರಿಗೆ ಹಾಲನ್ನು ಹಾಕಿ ಮೇಲಕ್ಕೇಳುವಾಗ ಹೃದಯಾಘಾತವಾಗಿ (Heart Attack) ಕುಸಿದು ಬೀಳುತ್ತಾರೆ. ಇದನ್ನು ಗಮನಿಸಿದ ಭಕ್ತರು ಕೂಡಲೇ ಅವರನ್ನು ಹಿಡಿದಿದ್ದು, ವ್ಯಕ್ತಿಯೊಬ್ಬರು ಸಿಪಿಆರ್​ ಮಾಡುತ್ತಾರೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ದೇವಾಲಯದಲ್ಲಿ ಈ ರೀತಿ ಹೃದಯಾಘಾತವಾಗಿ ಮೃತಪಟ್ಟಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಹೈದರಾಬಾದ್​ನಲ್ಲಿ ವಿಷ್ಣುವರ್ಧನ್​ ಹೆಸರಿನ ವ್ಯಕ್ತಿಯೊಬ್ಬರು ಹನುಮಾನ್​ ಮಂದಿರಲ್ಲಿ ದೇವರಿಗೆ ಪೂಜೆ ಸಲ್ಲಿಸುವಾಗ ಇದೇ ರೀತಿ ಹೃದಯಾಘಾತವಾಗಿ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net