

ಪುಣೆ: ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಕಲಾವಿದನೊಬ್ಬ (Garba King) ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ. ಈ ಘಟನೆ ಪುಣೆಯಲ್ಲಿ (pune) ನಡೆದಿದೆ.
ಪುಣೆಯ ‘ಗರ್ಬಾ ಕಿಂಗ್’ ಎಂದು ಕರೆಯಲ್ಪಡುವ ನಟ ಅಶೋಕ್ ಮಾಲಿ ಮೃತರು. ಇವರು ಚಕನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗರ್ಬಾ ಪ್ರದರ್ಶನ ಮಾಡುವಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗರ್ಬಾ ಕಿಂಗ್ ಎಂದೇ ಪ್ರಸಿದ್ಧರಾಗಿರುವ ನಟ ಅಶೋಕ್ ಮಾಲಿ ಹೃದಯಾಘಾತಕ್ಕೆ ನಿಧನರಾದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ನೃತ್ಯ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ.
ದಸರಾ ಸಮಯದಲ್ಲಿ ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್ ಗ್ರಾಮದಲ್ಲಿ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಶೋಕ್ ಮಾಲಿ ಭಾಗವಹಿಸಿದ್ದು, ಪ್ರದರ್ಶನ ನೀಡಲು ಆಗಮಿಸಿದ್ದರು. ಅಶೋಕ್ ಅವರ ಗರ್ಬಾ ನೃತ್ಯ ಕಾಣಲು ಅನೇಕ ಜನರು ನೆರೆದಿದ್ದರು.
ಪ್ರದರ್ಶನದ ವೇಳೆ ಅಶೋಕ್ಗೆ ಹೃದಯಾಘಾತವಾಗಿದೆ. ನೃತ್ಯ ಮಾಡುತ್ತಿರುವಾಗಲೇ ಅಶೋಕ್ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಅಶೋಕ್ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.