ಕರೊನಾ ರೋಗಿಗಳ ಬೇಸರ ಕಳೆಯಲು  ಆರೋಗ್ಯ ಕಾರ್ಯಕರ್ತರ ಡಾನ್ಸ್ ಚಾಲೆಂಜ್

danc april 1 4
Published on

ಅಮೆರಿಕದಲ್ಲಿ ಒಂದೆಡೆ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದರೆ, ಮತ್ತೊಂದೆಡೆ ಆರೋಗ್ಯ ಕಾರ್ಯಕರ್ತರು ಕ್ವಾರಂಟೈನ್​ನಲ್ಲಿರುವವರ ಬೇಸರ ಹಾಗೂ ತಮ್ಮ ಕೆಲಸದ ಒತ್ತಡವನ್ನು ನೀಗಿಸಿಕೊಳ್ಳಲು ಡಾನ್ಸ್ ಮಾಡುತ್ತಿದ್ದಾರೆ.

ಟಿಕ್​ಟಾಕ್​ನಂಥ ಸಾಮಾಜಿಕ ಮಾಧ್ಯಮಗಳಲ್ಲಿನ ಡಾನ್ಸ್ ಚಾಲೆಂಜ್​ಗಳಿಗೆ ಇವರು ಪ್ರತ್ಯುತ್ತರವಾಗಿ ಡಾನ್ಸ್ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಇದು ಸದ್ಯ ಟ್ರೆಂಡ್ ಆಗಿದ್ದು, ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರ ಡಾನ್ಸ್ ವಿಡಿಯೋಗಳು ವೈರಲ್ ಆಗಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಕಾರ್ಯಕರ್ತರ ಮೇಲಿನ ಒತ್ತಡ ಕೂಡ ಹೆಚ್ಚುತ್ತಿದೆ.

‘ಸೋಂಕಿತರ ದುಃಖವನ್ನು ದೂರ ಮಾಡಿ ಮುಗುಳ್ನಗೆ ಮೂಡಿಸಲು ಹಾಗೂ ನಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಇದೊಂದು ಪ್ರಯತ್ನವಷ್ಟೇ. ಆದರೆ ಇದರಿಂದ ಸೋಂಕಿನ ಗಂಭೀರತೆಯೇನೂ ಕಡಿಮೆಯಾಗದು’ ಎನ್ನುತ್ತಾರೆ ಆರೋಗ್ಯ ಕಾರ್ಯಕರ್ತ ಬೇಕರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net