More

    ಕರೊನಾ ಸೋಂಕಿಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ: ರಾಜ್ಯದಲ್ಲಿ 7ಕ್ಕೆ ಏರಿದ ಸಾವಿನ ಸಂಖ್ಯೆ

    ಬೆಂಗಳೂರು: ಕರೊನಾ ಸೋಂಕಿಗೆ ತುತ್ತಾಗಿ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.  ಇವರ ಸಾವಿನಿಂದ ಕಲಬುರಗಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

    ಸೋಂಕಿಗೆ ತುತ್ತಾಗಿದ್ದ 55 ವರ್ಷದ ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಶರತ್​ ತಿಳಿಸಿದ್ದಾರೆ.

    205ನೇ ಸಂಖ್ಯೆಯ ರೋಗಿಯಾಗಿ ಕಲಬುರಗಿ ಇಎಎಸ್​ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಕಲಬುರಗಿಯ ಮೋಮಿನ್​ ಪುರದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ರಾಜ್ಯದಲ್ಲಿ ಸೋಂಕಿಗೆ ಇಲ್ಲಿವರೆಗೆ 7 ಮಂದಿ ಮೃತಪಟ್ಟಿದ್ದಾರೆ. ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನವರೆಗೆ ಮತ್ತೆ 15 ಜನರಿಗೆ ಸೋಂಕು ತಗುಲಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

    ಈವರೆಗೆ 7  ಜನರು ಮೃತಪಟ್ಟಿದ್ದು, ಒಟ್ಟು 59 ಜನರು ಚೇತರಿಕೆ ಕಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

    15 ಜನರ ಪೈಕಿ ಹುಬ್ಬಳ್ಳಿ- ಧಾರವಾಡದ ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದ್ದಾರೆ. ಇವರೆಲ್ಲರೂ ರೋಗಿ ಸಂಖ್ಯೆ 194 ಜತೆ ಸಂಪರ್ಕ ಹೊಂದಿದ್ದರು.

    ಅಂತೆಯೇ, ಮಂಡ್ಯ ಜಿಲ್ಲೆ ಮಳವಳ್ಳಿಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ರೋಗಿ ಸಂಖ್ಯೆ 179ರ ತಾಯಿ, ಮಗಳು ಹಾಗೂ ಸಹೋದರಿ ಮಗ ಸೇರಿದ್ದಾರೆ.

    ಬೆಳಗಾವಿ ಜಿಲ್ಲೆ ರಾಯಬಾಗ್​ನ ರೋಗಿ ಸಂಖ್ಯೆ 149ರ ಸಂಪರ್ಕದಲ್ಲಿದ್ದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.
    ಇನ್ನು, ಬೀದರ್​ನ ರೋಗಿ ಸಂಖ್ಯೆ 221ರ ಸಂಪರ್ಕದಲ್ಲಿದ್ದ ಮಗಳು ಹಾಗೂ ಸಹೋದರನ ಮಗಳಲ್ಲಿ ಸೋಂಕು ಕಂಡು ಬಂದಿದೆ.

    ಇದಲ್ಲದೆ, ಬಾಗಲಕೋಟೆ ಮುಧೋಳ್​ನ ಒಬ್ಬರು ಹಾಗೂ ಬೆಂಗಳೂರು ನಗರದ ಒಬ್ಬರಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ದೆಹಲಿ ಪ್ರಯಾಣದ ಹಿನ್ನೆಲೆ ಇದ್ದ ಒಬ್ಬರಿಗೆ ಸೋಂಕು ವ್ಯಾಪಿಸಿದೆ.

    ಈವರೆಗೆ ಬೆಂಗಳೂರಿನಲ್ಲಿ ಒಟ್ಟು 77 ಜನರಿಗೆ, ಮೈಸೂರಿನಲ್ಲಿ 48, ಬೆಳಗಾವಿ-17, ಕಲಬುರಗಿ-13, ಬೀದರ್​-13 ಹಾಗೂ ದಕ್ಷಿಣಕನ್ನಡದ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಇಲಾಖೆ ತಿಳಿಸಿದೆ.

    ಲಾಕ್​ಡೌನ್​ ತೆರವುಗೊಳಿಸುವ ಬಗ್ಗೆ ಸಿಎಂ ಸಮಾಲೋಚನೆ, ಖಾಸಗಿ ಸಂಸ್ಥೆಯಿಂದ ಸ್ಮಾರ್ಟ್​ ಲಾಕ್​ಡೌನ್​ ಕುರಿತು ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts