ಸಮತೋಲನ ಆಹಾರದಿಂದ ಆರೋಗ್ಯ

nrp darmastala
ಎನ್.ಆರ್.ಪುರ ತಾಲೂಕು ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಿಂಗಳ ಸಭೆ ನಡೆಯಿತು. ಭಾಗ್ಯಾ ನಂಜುಂಡಸ್ವಾಮಿ, ಮಂಜುಳಾ ಮಂಜುನಾಥ್, ಕೆ.ಎನ್.ಸುಮಿತ್ರಾ, ವಾಣಿ ನರೇಂದ್ರ, ಜಯಂತಿ, ಶಶಿಕಲಾ ಇದ್ದರು.
Published on

ಎನ್.ಆರ್.ಪುರ: ಆರೋಗ್ಯಕರ ಜೀವನಕ್ಕಾಗಿ 5 ಸೂತ್ರಗಳನ್ನು ಅಳವಡಿಸಿಕೊಳ್ಳಿ ಎಂದು ಅಗ್ರಹಾರದ ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಸಲಹೆ ನೀಡಿದರು.
ಅವರು ಭಾನುವಾರ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದುರ್ಗಾಂಬಾ ಜ್ಞಾನ ವಿಕಾಸ ಕೇಂದ್ರದ ತಿಂಗಳ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆರೋಗ್ಯದ ಮಹತ್ವ ಬಗ್ಗೆ ಮಾತನಾಡಿದರು.
ನಿತ್ಯ ವ್ಯಾಯಾಮ, ಒತ್ತಡ ಕಡಿಮೆ ಮಾಡಿಕೊಳ್ಳುವುದು, ಸಮತೋಲನ ಆಹಾರ, ಉತ್ತಮ ನಿದ್ರೆ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ದೀರ್ಘಕಾಲ ರೋಗ ಮುಕ್ತರಾಗಿ ಜೀವನ ನಡೆಸಬಹುದು. ಹಿಂದೆ ಹಿರಿಯರು ಆಯಾ ಸಂದರ್ಭಕ್ಕೆ ತಕ್ಕಂತೆ ಆಹಾರ ಸಿದ್ಧಪಡಿಸಿ ಕುಟುಂಬದ ಆರೋಗ್ಯ ಕಾಪಾಡುತ್ತಿದ್ದರು. ಆದರೆ ಇಂದು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಜಂಕ್ ಫುಡ್‌ಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಗೊತ್ತಿಲ್ಲದಂತೆ ವಿಷಯುಕ್ತ ಆಹಾರ ನೀಡುತ್ತಿದ್ದೇವೆ. ಹಿಂದೆ ಆಹಾರವೇ ಔಷಧಿಯಾಗಿತ್ತು. ಆದರೆ ಇಂದು ಔಷಧಿಯೇ ಆಹಾರವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಕೆ.ಎನ್. ಸುಮಿತ್ರಾ ಅವರು ಗೆಳತಿ ಅಂಕಣ ಓದಿದರು. ಮಂಜುಳಾ ಮಂಜುನಾಥ್, ಕಡಹಿನಬೈಲು ಒಕ್ಕೂಟದ ಉಪಾಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷೆ ವಾಣಿ ನರೇಂದ್ರ, ದುರ್ಗಾಂಬ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಜಯಂತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಲಕ್ಷ್ಮೀ ತಂಡದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net