ಮರಡಿಯೂರಲ್ಲಿ ಆರೋಗ್ಯ ತಪಾಸಣಾ ಶಿಬಿರ

Bylkuppe 2
Published on

ಬೈಲಕುಪ್ಪೆ: ಸಮೀಪದ ಆವರ್ತಿ ಗ್ರಾಮ ಪಂಚಾಯಿತಿಯ ಮರಡಿಯೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹೆಲ್ತ್ ಕೇರ್ ಸೆಂಟರ್ ಹಾಗೂ ರೋಟರಿ ಮಿಡ್‌ಟೌನ್ ಸಹಭಾಗಿತ್ವದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಪಿರಿಯಾಪಟ್ಟಣದ ರೋಟರಿ ಮಿಡ್‌ಟೌನ್ ಅಧ್ಯಕ್ಷ ತಿರುಮಲಪುರದ ರಾಜೇಗೌಡ ಶಿಬಿರ ಉದ್ಘಾಟಿಸಿ ಮಾತನಾಡಿ, ‘ರೋಟರಿ ನಡೆ ಹಳ್ಳಿಯ ಆರೋಗ್ಯದ ಕಡೆ’ ಶೀರ್ಷಿಕೆಯಡಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ. ಗ್ರಾಮೀಣ ಜನರು ಎಷ್ಟೇ ಒತ್ತಡ ಇದ್ದರೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ರೋಟರಿ ಮಿಡ್ ಟೌನ್ ಸದಸ್ಯ ಜವರೇಗೌಡ ಮಾತನಾಡಿದರು. ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ಬಾಬು ಮತ್ತು ಡಾ.ಯಶಸ್ವಿನಿ ಜನರ ಆರೋಗ್ಯ ತಪಾಸಣೆ ನಡೆಸಿದರು. ರೋಟರಿ ಮಿಡ್‌ಟೌನ್ ಸದಸ್ಯರಾದ ಎಂ.ಎಂ.ರಾಜೇಗೌಡ, ಕೆ.ಪಿ.ಹೆಗಡೆ, ಸತ್ಯನಾರಾಯಣ, ಬಸವೇಗೌಡ, ಹರೀಶ, ಮುಖಂಡ ರಾಜು ಬೈಲಕುಪ್ಪೆ, ಸುಬ್ರಹ್ಮಣ್ಯ, ಮರಡಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಿರೀಶ್, ಹೆಲ್ತ್ ಕೇರ್ ಸಿಬ್ಬಂದಿ ಗಣೇಶ, ಜ್ಯೋತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net