ಆರೋಗ್ಯದ ಆತ್ಮವಿಶ್ವಾಸ ಹೆಚ್ಚಿಸಲು ಯೋಗ ಅವಶ್ಯ

Oplus_131074
Oplus_131074
Published on

ರಾಣೆಬೆನ್ನೂರ: ದೈಹಿಕ ಹಾಗೂ ಮನಸ್ಸಿನ ಆರೋಗ್ಯಕ್ಕಾಗಿ ಆತ್ಮ ವಿಶ್ವಾಸ ಹೆಚ್ಚಿಸುವುದಕ್ಕಾಗಿ ಯೋಗ ಅವಶ್ಯಕವಾಗಿದೆ ಎಂದು ಪ್ರಾಚಾರ್ಯ ಪಿ. ಮುನಿಯಪ್ಪ ಹೇಳಿದರು.

ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯೋಗ ಅಭ್ಯಾಸವು ಇಂದಿನ ಮಕ್ಕಳಿಗೆ ಅವಶ್ಯಕವಾಗಿದ್ದು, ಸದಾ ಕ್ರಿಯಾಶೀಲತೆ ಇರಲು, ಮನಸ್ಸಿನ ಏಕಾಗ್ರತೆ, ಒತ್ತಡದ ಬದುಕಿನಿಂದ ದೂರವಿರಲು ಯೋಗ ಅತ್ಯಂತ ಮಹತ್ವದಾಗಿದೆ ಎಂದರು.

ಉಪನ್ಯಾಸಕ ಎಚ್​. ಶಿವಾನಂದ ಮಾತನಾಡಿ, ವಿದ್ಯಾಥಿರ್ಗಳು ಯೋಗಕ್ಕೆ ಹೆಚ್ಚಿನ ಮಹತ್ವ ಕೊಟ್ಟು ನಿತ್ಯವೂ ಅರ್ಧ ಗಂಟೆ ಯೋಗ ಅಭ್ಯಾಸ ಮಾಡಿದರೆ, ಶ್ರದ್ಧೆ, ನೆನಪಿನ ಶಕ್ತಿ ಹೆಚ್ಚಾಗುತ್ತದೆ. ವಿದ್ಯಾಥಿರ್ಗಳು ಆರೋಗ್ಯಕರ ಜೀವನಕ್ಕೆ ನಿತ್ಯ ಯೋಗ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಸಂತೋಷ ಅಂಗಡಿ, ರ್ಪೂಣಿಮಾ ಮಾಗನೂರು, ಪ್ರವಿಣಕುಮಾರ ಆರ್​., ಜಗದೀಶ ಕೆ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net