ದೊಡ್ಡನಹುಂಡಿಯಲ್ಲಿ ಆರೋಗ್ಯ ತಪಾಸಣೆ

17 oct tnp 01
ತಿ.ನರಸೀಪುರ ತಾಲೂಕಿನ ದೊಡ್ಡನಹುಂಡಿಯಲ್ಲಿ ಶುಕ್ರವಾರ ಆರೋಗ್ಯ ತಪಾಸಣೆ ನಡೆಯಿತು. ಜಿ.ನಂಜುಂಡಸ್ವಾಮಿ, ನಂಜುಂಡಪ್ಪ, ರಾಜೇಂದ್ರ, ಬಸವರಾಜು, ಜಿ.ಸ್ವಾಮಿ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಜಿಲ್ಲಾ ರಜತ ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು.

ಮೂಳೆ, ನೇತ್ರ, ದಂತ ಸೇರಿದಂತೆ ಹಲವು ರೋಗಗಳನ್ನು ವೈದ್ಯರು ತಪಾಸಣೆ ನಡೆಸಿದರು. ಜಿಲ್ಲಾ ಫ್ಲೋರೋಸಿಸ್ ಸಲಹೆಗಾರರಾದ ಯಾಕೂಕ್ ನವೀನಾ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆಯೂ ಗ್ರಾಮದಲ್ಲಿ ತಪಾಸಣೆ ಮಾಡಲಾಯಿತು. ಸುಮಾರು 20ಕ್ಕೂ ಹೆಚ್ಚು ಜನರಿಗೆ ಫ್ಲೋರೋಸಿಸ್ ಅಂಶದಿಂದ ಮಂಡಿನೋವು ಇರುವುದು ಪತ್ತೆಯಾಗಿತ್ತು. ಅವರಿಗೆ ಔಷಧ ನೀಡಿ, ಶುದ್ಧ ಕುಡಿಯುವ ನೀರು ಕುಡಿಯುವಂತೆ ಅಗತ್ಯ ಸಲಹೆ ನೀಡಲಾಗಿತ್ತು. ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಎರಡು ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಸ್ವಲ್ಪ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿತ್ತು. ಹಾಗಾಗಿ ಗ್ರಾಮಸ್ಥರು ಉತ್ತಮ ಆಹಾರ, ಶುದ್ಧ ನೀರು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಮದ ನೂರಾರು ನಿವಾಸಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಕೋಶಾಧ್ಯಕ್ಷ ಜಿ.ನಂಜುಂಡಸ್ವಾಮಿ, ಗ್ರಾಮದ ಮುಖಂಡರಾದ ನಂಜುಂಡಪ್ಪ, ರಾಜೇಂದ್ರ, ಬಸವರಾಜು, ನಾಡಗೌಡರಾದ ಜಿ.ಸ್ವಾಮಿ ಮತ್ತಿತರರು ಹಾಜರಿದ್ದರು.

ಸಮುದಾಯ ಆರೋಗ್ಯ ಅದಿಕಾರಿ ಎಂ.ಭೂಮಿಕಾ, ಜಿಲ್ಲಾ ಫ್ಲೋರೋಸಿಸ್ ಸಲಹೆಗಾರರಾದ ಡಾ.ಸೈಯ್ಯದ್ ಶಬನಾ ಹುಸೇನ್, ಪ್ರಯೋಗಶಾಲಾ ತಂತ್ರಜ್ಞ ಸಂತೋಷ್ ಹೊಸಕೇರಿ ಅವರು ತಪಾಸಣೆ ನಡೆಸಿ ಅಗತ್ಯ ಇರುವವರಿಗೆ ಔಷಧ, ಮಾತ್ರೆ ನೀಡಿ, ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net