ದುಡಿಮೆಗಾಗಿ ಸದೃಢ ಆರೋಗ್ಯ ಕಾಪಾಡಿಕೊಳ್ಳಿ, ಗ್ರಾಮ ಆರೋಗ್ಯ ಅಭಿಯಾನದಲ್ಲಿ ಡಾ.ಸುರಗಿಮಠ ಹೇಳಿಕೆ

IMG-20230525-WA0029.webp
Published on

ಬೆಳಗಾವಿ : ದೇಹದ ಆರೋಗ್ಯ ಸದೃಢವಾಗಿದ್ದರೆ ದುಡಿಯಲು ಉತ್ಸಾಹ ಇರುತ್ತದೆ. ಕಾರಣ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಪುತ್ರಯ್ಯ ಸುರಗಿಮಠ ಹೇಳಿದರು.

ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.
ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.

ಚನ್ನಮ್ಮ‌ಕಿತ್ತೂರು ತಾಲೂಕಿನ‌ ಹಿರೇನಂದಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜಮಳೂರ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಕಿತ್ತೂರು ತಾಲೂಕು ಪಂಚಾಯಿತಿ ಹಾಗೂ ಹಿರೇನಂದಿಹಳ್ಳಿ ಗ್ರಾಪಂ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕೂಲಿಕಾರ್ಮಿಕರಿಗೆ ಗ್ರಾಪಂ ವತಿಯಿಂದ ಗುರುವಾರ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನರೇಗಾ ಕೂಲಿ ಕಾರ್ಮಿಕರು ಆರೋಗ್ಯದಿಂದ ಇರಲು ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರಣ ಯಾವುದೇ ಹಿಂಜರಿಕೆ ಪಡೆಯದೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ರೋಗಗಳ ತಪಾಸಣೆ ಮಾಡಿಸಿಕೊಂಡು ಉಚಿತ ಚಿಕಿತ್ಸೆ ಪಡೆಯಬೇಕು ಎಂದರು.

ಶಿಬಿರದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಿಸಲಾಯಿತು.
ಶಿಬಿರದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಿಸಲಾಯಿತು.

ಪಂಚಾಯತ್‌ಅಭಿವೃದ್ಧಿ ಅಧಿಕಾರಿ ರವಿ ಉಡಕೇರಿ ಮಾತನಾಡಿ ಮನರೇಗಾ ಕೂಲಿಕಾರ್ಮಿಕರು ಕೆಲಸಕ್ಕೆ ಬರುವದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಮಯ ಇರುವುದಿಲ್ಲ ಆದಕಾರಣ ಸರಕಾರ ನಿಮ್ಮ ಆರೋಗ್ಯ ಖಾಳಜಿವಹಿಸಿ ನೀವು ಇದ್ದ ಜಾಗದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಈ ಶಿಬಿರದ ಉಪಯೋಗ ಪ್ರತಿಯೊಬ್ಬರು ಪಡೆದು ಆರೋಗ್ಯಯುತ ಜೀವನ ಸಾಗಿಸಿ ಎಂದರು.

ಪಿಡಿಓ ರವಿ ಉಡಕೇರಿ, ಗ್ರಾಪಂ ಅಧ್ಯಕ್ಷ ಗುರುಸಿದ್ದಪ್ಪ ದಾಸನಕೊಪ್ಪ,
ಸದಸ್ಯರಾದ‌ ವಿಠ್ಠಲಹಣಬರ ದೇಗಲೋಳ್ಳಿ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ಬಿಎಫ್ಟಿ ಬಸವರಾಜ ಹೊಸಮನಿ, ಎನ್.ಸಿ.ಡಿ ತಾಲೂಕು ಸಂಯೋಜಕ ರಾಘವೇಂದ್ರ ಬಾಗೇವಾಡಿ, ಕಾರ್ಯದರ್ಶಿ ಪ್ರಕಾಶ ಬಸ್ಸಾಪುರ,‌ ಸಿಬ್ಬಂದಿ ಅನಿಲ ದಾಸನಕೊಪ್ಪ, ಮಲ್ಲಪ್ಪ ಕುದರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net