ಜ್ಞಾನಲೋಕದಲ್ಲಿ ಆರೋಗ್ಯ ತಪಾಸಣೆ

h6- Jnanaloka 1
Published on

ಹುಬ್ಬಳ್ಳಿ; ಇಲ್ಲಿಯ ಭೈರಿದೇವರಕೊಪ್ಪ ಗಾಮನಗಟ್ಟಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಭಗವದ್ಗೀತಾ ಜ್ಞಾನಲೋಕದಲ್ಲಿ ಕೆಎಲ್​ಇ ಸಂಸ್ಥೆಯ ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ ಹಾಗೂ ಬ್ರಹ್ಮಕುಮಾರೀಸ್​ನ ರಾಜಯೋಗ ಎಜ್ಯುಕೇಶನ್ ರಿಸರ್ಚ ಫೌಂಡೇಷನ್ ಮೆಡಿಕಲ್ ವಿಂಗ್​ನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಾರ್ವಜನಿಕರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆಯ ಆಡಳಿತಾಧಿಕಾರಿ ವೈ.ಎಸ್. ಹಂಜಿ ನೆರವೇರಿಸಿದರು. ಅತಿಥಿಗಳಾಗಿ ಡಾ. ಜಿ.ಎಸ್. ತನವಾಡೆ, ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.

ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನ ನಿರ್ದೇಶಕ ಡಾ. ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸಿದ್ದರು. ಕೋ-ಆಪರೇಟಿವ್ ಆಸ್ಪತ್ರೆಯ ವೈದ್ಯರಾದ ಡಾ. ಎನ್. ಆಕಾಶ, ಡಾ. ಶ್ವೇತಾ ವೆರ್ಣೆಕರ, ಡಾ. ಲಕ್ಷ್ಮೀ ಶೆಟ್ಟರ, ಡಾ. ಅಭಿಜಿತ, ಡಾ. ಸಂಸ್ಕೃತಿ, ಡಾ. ಗೋಮತಿ, ಡಾ. ಶಿಲ್ಪಾ ಗೊನಡಕಲೆ, ಡಾ. ಐಶ್ವರ್ಯಾ ಪಿಳ್ಳೆ ಅವರು ತಪಾಸಣೆ ನಡೆಸಿದರು.

ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ವಲಯ ಸಂಚಾಲಕರಾದ ಬ್ರಹ್ಮಕುಮಾರಿ ನಿರ್ಮಲಾ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net