ಪತ್ರಕರ್ತರು ಆರೋಗ್ಯ ರಕ್ಷಣೆಗೆ ಗಮನಹರಿಸಲಿ

22 HDK01
Published on
  • ಎಚ್.ಡಿ.ಕೋಟೆ: ಸಮಾಜವನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವಂತೆ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಎಚ್.ಡಿ.ಕೋಟೆ ರೋಟರಿ ಸಂಸ್ಥೆ, ತಾಲೂಕು ಆರೋಗ್ಯ ಇಲಾಖೆ, ಮೈಸೂರಿನ ಸುಶ್ರುತ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಆಯೋಜಿಸಿದ್ದ ನೇತ್ರ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಸಮಯ ಕೊಡುತ್ತಾ ಪತ್ರಕರ್ತರು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸುವುದಿಲ್ಲ, ಅಂತಹ ಪತ್ರಕರ್ತರಿಗೆ ಇಂತಹ ಶಿಬಿರಗಳು ಅನುಕೂಲವಾಗಲಿದೆ. ಆದ್ದರಿಂದ ಪತ್ರಕರ್ತರು ಸಮಾಜ ತಿದ್ದುವ ಜತೆಗೆ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
  • ತಾಲೂಕು ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಸರಗೂರು, ಎಚ್.ಡಿ.ಕೋಟೆ ತಾಲೂಕಿನಲ್ಲಿ ಪತ್ರಕರ್ತರು, ಆರೋಗ್ಯ ಇಲಾಖೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಆರೋಗ್ಯ ಇಲಾಖೆಯ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಪತ್ರಕರ್ತರು ಉತ್ಸುಕತೆಯಿಂದ ಭಾಗವಹಿಸುತ್ತಾರೆ. ಆಸ್ಪತ್ರೆಯಲ್ಲಿನ ನ್ಯೂನತೆಗಳನ್ನು ನಮಗೆ ಎತ್ತಿ ತೋರಿಸಿ ತಿದ್ದಿಕೊಳ್ಳುವಂತೆ ಎಚ್ಚರಿಸುತ್ತಾರೆ. ಪರ್ತಕರ್ತರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ರೀತಿಯ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net