

ಹನಗೋಡು: ಹನಗೋಡು ಗ್ರಾಮ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹನಗೋಡಿನಲ್ಲಿ ಶನಿವಾರ ಬೀದಿ ನಾಟಕ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು.
ಸ್ಪಂದನ ಕಲಾ ತಂಡದ ಕಲಾವಿದರು ನಾಟಕದ ಮೂಲಕ ಆಯುಷ್ಮಾನ್ ಕಾರ್ಡ್ ಉಪಯೋಗ, ಮನೋವೈಕಲ್ಯತೆ, ಭ್ರೂಣ ಹತ್ಯೆಯಂತಹ ಸಾಮಾಜಿಕ ಸಮಸ್ಯೆ, ತಾಯಿ-ಮಗುವಿನ ಆರೈಕೆ, ಸಾಂಕ್ರಾಮಿಕ, ರೋಗಗಳ ತಡೆಗಟ್ಟುವಿಕೆ, ಮುಂಜಾಗ್ರತೆ, ಹದಿಹರೆಯದ ಸಮಸ್ಯೆಯಂತಹ ಹಲವಾರು ವಿಷಯಗಳ ಕುರಿತು ಅಭಿನಯ, ನೃತ್ಯ ಹಾಗೂ ಕ್ರಾಂತಿಕಾರಿ ಗೀತೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಿಡಿಒ ಅನಿತಾ, ತಂಡದ ನಾಯಕಿ ವಸಂತ ಹೊನ್ನೆನಹಳ್ಳಿ, ಗಜೇಂದ್ರ, ಹನುಮಯ್ಯ, ಶಿವಕುಮಾರ್, ಗೀತಾ, ಗಿರಿಜಾ, ವಿಜಯಕುಮಾರ್ ಮತ್ತು ಕಲಾವಿದರು ಇದ್ದರು.