

collision:ರಾಯಚೂರು (ಸಿಂಧನೂರು); ತಾಲೂಕಿನ ಮುಳ್ಳೂರು ಕ್ಯಾಂಪ್ನ ಮಸ್ಕಿ ಹೆದ್ದಾರಿಯಲ್ಲಿ ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸೋಮವಾರ ರಾತ್ರಿ ಮೂವರು ಯುವಕರು ದಾರುಣ ಸಾವಿಗಿಡಾಗಿದ್ದಾರೆ.
ಸಿಂಧನೂರು ಸಮೀಪದ ಬಸಾಪುರ(ಇಜೆ) ಗ್ರಾಮದ ಶಿವು(32), ಚಿಕ್ಕಬೇರ್ಗಿ ಗ್ರಾಮದ ಹನುಮೇಶ(30) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತೀವ್ರವಾಗಿಗೊಂಡ ಆಸ್ಪತ್ರೆಗೆ ತೆರಳುವಾಗ ಕೋಳಬಾಳ ಗ್ರಾಮದ ಮೌನೇಶ(21) ದಾರಿಯಲ್ಲಿ ಅಸುನಿಗಿದ್ದಾರೆ.
ಇದನ್ನೂ ಓದಿ:ಹುಲ್ಲುಗಾವಲು ನಾಶದಿಂದ ಬೂದು ತೋಳಗಳ ಸಂತತಿ ಕಣ್ಮರೆ
ಅತೀ ವೇಗವಾಗಿ ಬಂದ ಎರಡು ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.