

Court:ಕೇಸ್ವೊಂದರ ಅರ್ಜಿ ವಿಚಾರಣೆ ಸಮಯದಲ್ಲಿ ವಕೀಲರೊಬ್ಬರು ''ಕ್ರಿಮಿನಲ್ ಪ್ರಕರಣದಲ್ಲಿ ನನ್ನ ಅರ್ಜಿ ಅಂಗೀಕರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ'' ಎಂದು ಸುಪ್ರೀಂಕೋರ್ಟ್ಗೆ ಬೆದರಿಕೆ ಹಾಕಿದ್ದಾರೆ ಎಂದು ಸೋಮವಾರ ವರದಿಯಾಗಿದೆ.
ವಕೀಲರ ಮಾತಿನಿಂದ ಬೇಸರಗೊಂಡ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಮತ್ತು ಉಜ್ವಲ್ ಭೂಯಾನ್ ಅವರಿದ್ದ ನ್ಯಾಯಪೀಠ, ಅವರ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಪರವಾನಿಯ ಅಮಾನತುಗೊಳಿಸಲು ಆಗದಿದ್ದರೆ ಮಾ.7ರೊಳಗೆ ನ್ಯಾಯಾಲಯಕ್ಕೆ ಕ್ಷಮೆಯಾಚಿಸುವಂತೆ ಆದೇಶಿಸಿತು.
ನಿಮ್ಮ ಮನವಿಗೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅದು ಹೇಗೆ ಬೆದರಿಕೆ ಹಾಕುತ್ತೀರಾ? ಎಂದು ಪ್ರಶ್ನಿಸಿದ ಪೀಠ, ನಿಮ್ಮ ಪರವಾನಿಯ ರದ್ದುಗೊಳಿಸಿ, ಎಫ್ಐಆರ್ ಹಾಕುವಂತೆ ಬಾರ್ ಕೌನ್ಸಿಲ್ ಅನ್ನು ಒತ್ತಾಯಿಸಲಿದ್ದೇವೆ ಎಂದು ಆಕ್ರೋಶಗೊಂಡಿದೆ.
ಇದೇ ಮಾ.7ರೊಗಳಗೆ ಕೋರ್ಟ್ಗೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮುಂದಿನ ಪರಿಣಾಮ ಎದರಿಸಬೇಕಾಗಿತು ಎಂದು ಪೀಠ ವಕೀಲರಿಗೆ ಸೂಚಿಸಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)