

ಜಗತ್ತಿನಾದ್ಯಂತ ಕರೊನಾ ವೈರಸ್ ಪ್ರಸರಣವಾಗುತ್ತಿದೆ. ಎಲ್ಲ ರಾಷ್ಟ್ರಗಳಲ್ಲೂ ಸರ್ಕಾರಗಳೂ ಸೋಂಕು ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿವೆ. ಜನರಲ್ಲಿ ಅರಿವು ಮೂಡಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆದರೆ ಇವೆಲ್ಲವುಗಳ ಮಧ್ಯೆಯೂ ಒಂದಷ್ಟು ಜನರು ತಮ್ಮ ಬೇಜವಾಬ್ದಾರಿ ಮುಂದುವರಿಸಿದ್ದಾರೆ. ಕೊವಿಡ್-19 ನಿಯಂತ್ರಣದ ಎಲ್ಲ ನಿಯಮಗಳನ್ನೂ ಉಲ್ಲಂಘಿಸುತ್ತಿದ್ದಾರೆ.
ಹಾಗೇ ಆಸ್ಟ್ರೇಲಿಯಾದಲ್ಲಿ ಓರ್ವ ಮಹಿಳೆ ಕೂಡ ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಲ್ಲದೆ, ಪ್ರಶ್ನೆ ಮಾಡಿದ ಪೊಲೀಸರನ್ನೇ ನಿಂದಿಸಿದ್ದಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸ್ ಅಧಿಕಾರಿಯೋರ್ವನ ತಲೆಯನ್ನು ಕಾಂಕ್ರೀಟ್ ಸ್ಲ್ಯಾಬ್ಗೆ ಜಜ್ಜಿದ್ದಾರೆ.
ಈ ಮಹಿಳೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಅದನ್ನು ಪ್ರಶ್ನಿಸಿದ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸುಶಾಂತ್-ರಿಯಾ ಪ್ರಕರಣದ ಪರಿಣಾಮ; ಹೆಚ್ಚಾಯಿತು ಬಂಗಾಳಿ ಮಹಿಳೆಯರ ನಿಂದನೆ
ಆರೋಪಿ ಮಹಿಳಿಗೆ 38 ವರ್ಷ. ಫ್ರಾಂಕ್ಸ್ಟನ್ ಬಳಿಯಶಾಪಿಂಗ್ ಸೆಂಟರ್ಗೆ ಫೇಸ್ ಮಾಸ್ಕ್ ಧರಿಸದೆ ಬಂದಿದ್ದಳು. ಅದನ್ನು ನೋಡಿದ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೇ ಸಿಟ್ಟಾದ ಮಹಿಳೆ, ಓರ್ವ ಅಧಿಕಾರಿಯನ್ನು ತಳ್ಳಿದ್ದಾರೆ. ಇನ್ನೋರ್ವ ಅಧಿಕಾರಿಯ ತಲೆಯನ್ನು ಸಿಮೆಂಟ್ ನೆಲಕ್ಕೆ ಚಚ್ಚಿದ್ದಾಳೆ. ಕೂದಲು ಹಿಡಿದು ಎಳೆದಾಡಿದ್ದಾಳೆ.
ಮಹಿಳೆಯ ವರ್ತನೆ ತೀರ ಅನಿರೀಕ್ಷಿತವಾಗಿತ್ತು. ಅವರು ತಾವೆಲ್ಲ ಕಾನೂನಿಗಿಂತ ದೊಡ್ಡವರು ಎಂದುಕೊಂಡುಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ 26 ವರ್ಷದ ಮಹಿಳಾ ಪೊಲೀಸ್ ಅಧಿಕಾರಿಯ ತಲೆಗೆ ತೀವ್ರ ಗಾಯವಾಗಿದ್ದು, ಫ್ರಾಂಕ್ಸ್ಟನ್ ಆಸ್ಪತ್ರೆಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)