

ಬೆಂಗಳೂರು: ಕೆ.ಆರ್.ಪುರದ ಕಬಾಬ್ ಅಂಗಡಿಗೂ ನನಗೂ ಸಂಬಂಧ ಇಲ್ಲ. ಬಿಜೆಪಿ, ಕಾಂಗ್ರೆಸ್‌ಗೂ ನನಗೆ ಸಂಬಂಧ ಇಲ್ಲ. ಸಮಾಜವಾದಿ ಪಾರ್ಟಿಯಿಂದ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಪಡೆದು 30 ಲಕ್ಷ ರೂ.ಖರ್ಚು ಮಾಡಿ ಸೋಲು ಕಂಡಿದ್ದೆನೆ ಎಂದು ಚೆನ್ನಾ ನಾಯ್ಕ, ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಸೆ ತೋರಿಸಿ 5 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೆನ್ನಾ ನಾಯ್ಕ, ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಧನಂಜಯ್ ಎಂಬಾತ ನನಗೆ ಕರೆ ಮಾಡಿ ರಾಜಕೀಯ ಭವಿಷ್ಯಕ್ಕೆ ದಾರಿ ಮಾಡುತ್ತೆನೆ.
ನಾನು ಹೇಳಿದಂತೆ ಕೇಳಬೇಕೆಂದು ಕಡೂರಿನಲ್ಲಿ ಚೈತ್ರಾ ಕುಂದಾಪುರಳನ್ನು ಪರಿಚಯ ಮಾಡಿಕೊಟ್ಟ. ಮೊದ ಮೊದಲು ನನ್ನ ಹೊಗಳಿದ ಚೈತ್ರಾ, ನಿಮಗೆ ಆರೇಳು ಭಾಷೆ ಬರುತ್ತವೆ. ನೀವು ರಾಷ್ಟ್ರೀಯ ನಾಯಕ ಆಗಲು ಅರ್ಹತೆ ಇದೆ. ಸಂಸದೆ ಶೋಭಾ ಕರಂದ್ಲಾಜೆಗೆ ಮುಂದಿನ ಬಾರಿ ಟಿಕೆಟ್ ಸಿಗುವುದಿಲ್ಲ. ಆಗ ಜಾಗಕ್ಕೆ ನಾನೇ ಅಭ್ಯರ್ಥಿ.