ಪೂಜೆಗೆ ಎಲೆ ತರಲೆಂದು ಬಾಲ ಬಾಲೆಯನ್ನು ಕರೆದೊಯ್ದ ಆ ಕಾಮಪೀಪಾಸು ಮಾಡಿದ್ದೇನು?

raped
Published on

ರಾಯ್ಪುರ: ಆಘಾತಕಾರಿ ಘಟನೆಯೊಂದರಲ್ಲಿ, 17 ವರ್ಷದ ಹುಡುಗ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಬಾವಿಗೆ ಎಸೆದಿದ್ದು, ಆಕೆಯ ಸೋದರ ಸಂಬಂಧಿಯನ್ನು ಕೊಲೆ ಗೈದಿದ್ದಾನೆ.
ಈ ದುರ್ಘಟನೆ ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್, ಅತ್ಯಾಚಾರಕ್ಕೊಳಗಾದ ಬಾಲಕಿ ಗಾಯಗೊಂಡಿದ್ದರೂ ಬಾವಿಯಲ್ಲಿ ತೇಲುತ್ತಿದ್ದು, ಸಹಾಯಕ್ಕಾಗಿ ಕೂಗಿದ ನಂತರ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಆ ದೃಶ್ಯ ನೋಡಿದ, ಅತ್ಯಾಚಾರಕ್ಕೊಳಗಾದ ಬಾಲಕಿಯ 6 ವರ್ಷದ ಸೋದರಸಂಬಂಧಿಯನ್ನು ಸಹ ಆರೋಪಿ ಕತ್ತು ಹಿಸುಕಿದ್ದಾನೆ.
ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಕ್ಸೊ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. 

ಬಾಲಕಿಗೆ ದೇಹದಾದ್ಯಂತ ಆದ ಗಾಯ ಮತ್ತು ಕಚ್ಚಿದ ಗುರುತುಗಳನ್ನು ನೋಡಿದ ಪೊಲೀಸರೂ ಗಾಬರಿಗೊಂಡಿದ್ದಾರೆ.
ಮಕ್ಕಳು ಹೊಲದಲ್ಲಿ ಆಟವಾಡುತ್ತಿದ್ದಾಗ ಪಕ್ಕದ ಗ್ರಾಮದ ಆರೋಪಿ ಪೂಜೆಗೆ ಎಲೆಗಳನ್ನು ಕಿತ್ತುಕೊಳ್ಳಲು ಸಹಾಯ ಮಾಡುವಂತೆ ಮಕ್ಕಳನ್ನು ಕೇಳಿದ್ದ. ಅವನು ಅವರಿಗೆ ಪರಿಚಿತನಾಗಿದ್ದರಿಂದ ಅವನೊಂದಿಗೆ ಹೋದರು.
ಆರೋಪಿ ಅವರನ್ನು 2 ಕಿಲೋಮೀಟರ್ ದೂರದಲ್ಲಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು 6 ವರ್ಷದ ಬಾಲಕನನ್ನು ಸಹೋದರಿಯ ಕಣ್ಣ ಮುಂದೆ ಕತ್ತು ಹಿಸುಕಿ ಪೊದೆಗಳಲ್ಲಿ ಎಸೆದ.
ನಂತರ, ಆಗಲೇ ಭಯಭೀತಳಾಗಿದ್ದ ಬಾಲಕಿಯನ್ನು ಆತ ಕಾಡಿನಲ್ಲಿ ಕರೆದೊಯ್ದು ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿ ಆಳವಾದ ಬಾವಿಗೆ ಎಸೆದಿದ್ದಾನೆ. ಆದರೆ ಅದೃಷ್ಟವಶಾತ್, ಹುಡುಗಿ ಬಾವಿಯಲ್ಲಿ ತೇಲುತ್ತಿದ್ದು, ಸಹಾಯಕ್ಕಾಗಿ ಕೂಗುತ್ತಿದ್ದಳು.
ನಂತರ, ದಾರಿಹೋಕನೊಬ್ಬ ಅವಳ ರೋದನವನ್ನು ಕೇಳಿ ಇತರ ಗ್ರಾಮಸ್ಥರ ಸಹಾಯದಿಂದ ಅವಳನ್ನು ರಕ್ಷಿಸಲು ಧಾವಿಸಿದ. ಬಾಲಕಿಯನ್ನು ಬಾವಿಯಿಂದ ಹೊರಗೆ ಕರೆತರಲಾಯಿತು.

ಘಟನೆ ಕುರಿತು ಪೊಲೀಸರಿಗೆ ವಿವರಿಸಿ ಅತ್ಯಾಚಾರಿ ಹೆಸರು ಹೇಳಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು, ಬಾಲಕನ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಸೋದರಸಂಬಂಧಿಯನ್ನು ಕೊಂದಿದ್ದಾಗಿ ಬಾಲಾಪರಾಧಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net