More

    ಟ್ರ್ಯಾಕ್ ಮೈ ವೈಫ್​’ಸ್ ಫೋನ್ ಅಂತ ಗೂಗಲ್ ಸರ್ಚ್ ಮಾಡ್ತಿದ್ದೀರಾ?: ನಿಮಗೊಂದು ಶಾಕಿಂಗ್​ ಸುದ್ದಿ ಇಲ್ಲಿದೆ!

    ಗಂಡನ ಮೇಲೊಂದು ಕಣ್ಣಿಡಿ, ಪತ್ನಿಯ ಫೋನ್ ಟ್ರ್ಯಾಕ್ ಮಾಡುವುದು ಹೇಗೆ ಎಂದೆಲ್ಲ ಗೂಗಲ್​ನಲ್ಲಿ ಸರ್ಚ್ ಮಾಡ್ತಿದ್ದೀರಾ?! ಕೂಡಲೇ ಟ್ರ್ಯಾಕ್​ ಯುವರ್ ವೈಫ್’ಸ್ ಫೋನ್, ಸ್ಪೈ ಆನ್ ಯುವರ್ ಹಸ್ಪೆಂಡ್​, ಹೌ ಟು ಕ್ಯಾಚ್​ ಚೀಟಿಂಗ್ ಸ್ಪೌಸ್​ ವಿತ್​ ದಿಸ್ ಸೆಲ್ ಫೋನ್​, ಟ್ರ್ಯಾಕ್ ಮೈ ವೈಫ್​’ಸ್ ಫೋನ್​, ವಾಂಟು ಟು ಸ್ಪೈ ಆನ್ ಯುವರ್ ವೈಫ್​? ಎಂಬಿತ್ಯಾದಿ ಸಾಲುಗಳುಳ್ಳ ಮಾಹಿತಿಗಳು ಗೂಗಲ್​ನಲ್ಲಿ ಕೂಡಲೇ ನಿಮ್ಮ ಎದುರು ಕಾಣಿಸಿಕೊಳ್ಳುವುದಲ್ಲವೆ! ಇಂತಹ ವಿಷಯಗಳನ್ನು ಸರ್ಚ್ ಮಾಡುವವರಿಗೊಂದು ಬ್ಯಾಡ್ ನ್ಯೂಸ್ ಇಲ್ಲಿದೆ!

    ಟ್ರ್ಯಾಕ್​ ಯುವರ್ ವೈಫ್’ಸ್ ಫೋನ್, ಸ್ಪೈ ಆನ್ ಯುವರ್ ಹಸ್ಪೆಂಡ್​ ಎಂಬಿತ್ಯಾದಿ ಪದಗಳುಳ್ಳ ಜಾಹೀರಾತುಗಳನ್ನು ಗೂಗಲ್​ ನಿಷೇಧಿಸಿದೆ. ಹೊಸ ನಿಯಮ ಪ್ರಕಾರ, ಜನರ ಮೇಲೆ ಅವರ ಅರಿವಿಗೆ ಬಾರದಂತೆ ಗೂಢಚರ್ಯೆ ಮಾಡಲು ತಂತ್ರಾಂಶ ಅಥವಾ ಜಿಪಿಎಸ್​ ಟ್ರ್ಯಾಕರ್​ಗಳನ್ನು ಹೊಂದಿದ ಆಡಿಯೋ ರೆಕಾರ್ಡರ್​, ಕ್ಯಾಮೆರಾ, ಡ್ಯಾಷ್ ಕ್ಯಾಮೆರಾ ಮತ್ತಿತರ ಉಪಕರಣಗಳನ್ನು ಇಂತಹ ವಾಕ್ಯಗಳನ್ನು ಬಳಸಿ ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ. ಆದಾಗ್ಯೂ, ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಿಗಾಕ್ಕೆ ಬಳಸುವ ಸರ್ವೈಲೆನ್ಸ್ ಉತ್ಪನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಗೂಗಲ್​ ಹೊಸ ನಿಯಮದ ವ್ಯಾಪ್ತಿಗೆ ಸೇರಿಸಿಲ್ಲ.

    ಇದನ್ನೂ ಓದಿ:ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್‌ಡೌನ್: ಗೋವಿಂದ ಕಾರಜೋಳ

    ಎನೇಬ್ಲಿಂಗ್ ಡಿಸ್​ಹೋನೆಸ್ಟ್​ ಬಿಹೇವಿಯರ್ ಎಂಬ ಶೀರ್ಷಿಕೆಯ ಹೊಸ ಪಾಲಿಸಿ ಆಗಸ್ಟ್​ 11ರಿಂದ ಚಾಲ್ತಿಗೆ ಬರಲಿದೆ. 2018ರಿಂದ ಇಲ್ಲಿವರೆಗೆ ನಡೆಸಿದ ಅಧ್ಯಯನ ಮತ್ತು ಸಂಶೋಧನೆಯ ಫಲಿತಾಂಶದ ಪರಿಣಾಮ ಗೂಗಲ್​ ಆಡ್ಸ್​ನ ನಿಯಮ ಪರಿಷ್ಕರಣೆ ಎಂದು ಕಂಪನಿ ಹೇಳಿಕೊಂಡಿದೆ. (ಏಜೆನ್ಸೀಸ್​)

    ವಿಚಿತ್ರ ಕಳ್ಳನಿಗೆ ಐಷಾರಾಮಿ ಕಾರು ಕೀಗಳದ್ದೇ ವ್ಯಾಮೋಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts