More

    ವಿಚಿತ್ರ ಕಳ್ಳನಿಗೆ ಐಷಾರಾಮಿ ಕಾರು ಕೀಗಳದ್ದೇ ವ್ಯಾಮೋಹ!

    ಕಳವು ಪ್ರಕರಣಗಳೂ ಕೆಲವೊಮ್ಮೆ ವಿಚಿತ್ರವಾಗಿರುತ್ತವೆ. ಕಳ್ಳತನದ ವಿಧಾನ, ಕಳ್ಳರ ಇತಿಹಾಸ, ಕಳವುಗೈದ ವಸ್ತುಗಳ ಕಾರಣಕ್ಕೆ ಅವುಗಳು ಹೆಚ್ಚು ಗಮನಸೆಳೆಯುತ್ತವೆ. ಅಂಥದ್ದೇ ಒಂದು ಕೇಸ್ ಇದು. ಆ ವ್ಯಕ್ತಿಗೆ ಐಷಾರಾಮಿ ಕಾರುಗಳ ಕೀ ಫೋಬ್​ ಗಳ ಮೇಲೆಯೇ ಕಣ್ಣು! ಬರೋಬ್ಬರಿ 1,900ಕ್ಕೂ ಹೆಚ್ಚು ಕಾರು ಕೀ ಫೋಬ್​ಗಳನ್ನು ಆತ ಕಳವು ಮಾಡಿದ್ದ. ಮಾರಾಟಕ್ಕೆ ಇ-ಬೇಯನ್ನು ನೆಚ್ಚಿಕೊಂಡಿದ್ದ!

    ಅಮೆರಿಕದ ಪೋಸ್ಟಲ್ ಇನ್​ಸ್ಪೆಕ್ಟರ್ ಸಲ್ಲಿಸಿದ ಅಫಿಡವಿಟ್ ಉಲ್ಲೇಖಿಸಿ ಡೆಟ್ರಾಯ್ಟ್​ ಫ್ರೀ ಪ್ರೆಸ್​ ಮಾಡಿರುವ ವರದಿ ಪ್ರಕಾರ, ಈ ವಿಚಿತ್ರ ಕಳ್ಳನ ಹೆಸರು ಜಸನ್​ ಗಿಬ್ಸ್. ವಯಸ್ಸು 41. ಹೊಸ ಹೊಸ ಕಾರುಗಳನ್ನು ಕಂಡರೆ ಅದನ್ನು ಡ್ರೈವ್ ಮಾಡುವ ಕ್ರೇಝ್​ ಗಿಬ್ಸ್​ಗೆ. ಫೋರ್ಡ್​, ಫಿಯೆಟ್​, ಜನರಲ್ ಮೋಟಾರ್ಸ್​ನ ಹೊಸ ಕಾರುಗಳು ಅಮೆರಿಕದಾದ್ಯಂತ ರೈಲುಗಳ ಮೂಲಕ ಬೇರೆ ಬೇರೆ ಕಡೆ ತಲುಪಿಸಲಾಗುತ್ತದೆ. ಅವುಗಳನ್ನು ರೈಲ್ವೆ ಯಾರ್ಡ್​ಗಳಲ್ಲಿ ನಿಲ್ಲಿಸಲಾಗಿರುತ್ತದೆ. ಇವುಗಳನ್ನು ಆ ಪಾರ್ಕಿಂಗ್​ ನಲ್ಲಿ ನಿಲ್ಲಿಸುವ ಕೆಲಸ ಗಿಬ್ಸ್​ದಾಗಿತ್ತು.

    ಇದನ್ನೂ ಓದಿ:ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್‌ಡೌನ್: ಗೋವಿಂದ ಕಾರಜೋಳ

    ಸಾಮಾನ್ಯವಾಗಿ ಇಂತಹ ಕಾರುಗಳಿಗೆ ಎರಡು ಕೀ ಫೋಬ್​ ಬರುತ್ತದೆ. ಗಿಬ್ಸ್ ಅವುಗಳ ಪೈಕಿ ಒಂದನ್ನು ಎತ್ತಿಟ್ಟುಕೊಳ್ಳುತ್ತಿದ್ದ. ಬಳಿಕ ಅದನ್ನು ಇ-ಬೇ ಮೂಲಕ ಮಾರಾಟ ಮಾಡುತ್ತಿದ್ದ. ಈ ರೀತಿಯಾಗಿ ಗಿಬ್ಸ್ ಇದುವರೆಗೆ 1,900ಕ್ಕೂ ಹೆಚ್ಚು ಕೀ ಫೋಬ್​ಗಳನ್ನು ಮಾರಾಟ ಮಾಡಿ ಅಂದಾಜು 45 ಲಕ್ಷ ರೂಪಾಯಿ ಗಳಿಸಿದ್ದಾನೆ. ಗಿಬ್ಸ್ ಸೈಲೆಂಟಾಗಿ ನಡೆಸುತ್ತಿದ್ದ ಈ ವ್ಯವಹಾರ ಬೆಳಕಿಗೆ ಬಂದ್ದದ್ದು ಹೀಗೆ. 2018ರ ಫೆಬ್ರವರಿ ತಿಂಗಳಿಂದೀಚೆಗೆ ಕಾರು ಕಂಪನಿಗಳು ಕೀ ಫೋಬ್​ ಕಾಣೆಯಾಗುತ್ತಿರುವ ಬಗ್ಗೆ ರೇಲ್​ ವೆಹಿಕಲ್ ಟ್ರಾನ್ಸ್​ಪೋರ್ಟರ್​ ಸಿಎಸ್​ಎಕ್ಸ್​ಗೆ ದೂರು ನೀಡಲಾರಂಭಿಸಿದರು. ಇದಾಗಿ, ಕಾರು ಡೀಲರ್​ಗಳು ಕೂಡ ಫೋಬ್ಸ್​ನ ಪ್ಯಾಟರ್ನ್​ ಮಿಸ್​ ಆಗುತ್ತಿರುವುದನ್ನು ಗಮನಿಸಿ ದೂರು ದಾಖಲಿಸಿದರು.

    ದೂರುಗಳನ್ನು ಪರಿಶೀಲಿಸಿದಾಗ ನಾಪತ್ತೆಯಾದ ಬಹುತೇಕ ಕೀ ಫೋಬ್ಸ್ ಫೋರ್ಡ್ ಕಂಪನಿಯ ಎಫ್​​-150 ಪಿಕ್​ಅಪ್​ ಗಾಡಿಗಳಿಗೆ ಸಂಬಂಧಿಸಿದ್ದಾಗಿದ್ದವು. ಅಮೆರಿಕದ ಫೆಡರಲ್ ಇನ್​ವೆಸ್ಟಿಗೇಷನ್​ ಏಜೆನ್ಸಿಯವರು ಎರಡು ವರ್ಷಗಳ ಸುದೀರ್ಘ ತನಿಖೆ ನಡೆಸಿ ಗಿಬ್ಸ್​ನ ಅಪರಾಧವನ್ನು ಸಾಕ್ಷಿ ಸಹಿತ ಸಾಬೀತು ಮಾಡಿವೆ. ತನಿಖೆ ವೇಳೆ ಇ-ಬೇ ಪ್ಲಾಟ್​ಫಾರಂನಲ್ಲಿ ಕಳ್ಳತನದ ಕಾರು ಕೀ ಫೋಬ್ಸ್ ಮಾರಾಟ ಆಗುತ್ತಿರುವುದನ್ನು ಪತ್ತೆ ಹಚ್ಚಿಸಿದರು. ಆರೋಪಿಯನ್ನು ಟ್ರ್ಯಾಪ್​ನಲ್ಲಿ ಸಿಲುಕಿಸಲು ಪೊಲೀಸರು ಇ-ಬೇ, ಇನ್​ಸ್ಟಾಗ್ರಾಂ, ಪೇಪಾಲ್​, ಫೇಸ್​ಬುಕ್​ ಖಾತೆಗಳ ಮೂಲಕ ಅನುಸರಣೆ ಮಾಡಿದರು. ಅದು ಫಲಕೊಟ್ಟು ಆರೋಪಿ ಬಲೆಗೆ ಬಿದ್ದ ನಂತರದಲ್ಲಿ ಹಂತ ಹಂತದ ವಿಚಾರಣೆಯಲ್ಲಿ ಎಲ್ಲವೂ ಸಾಬೀತಾಗುತ್ತ ಹೋಯಿತು. (ಏಜೆನ್ಸೀಸ್​)

    ಎಸ್​ಐಪಿ ಮೂಲಕ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಲು ಶೀಘ್ರವೆ ಸಿಗಲಿದೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts