More

    ಎಸ್​ಐಪಿ ಮೂಲಕ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಲು ಶೀಘ್ರವೆ ಸಿಗಲಿದೆ ಅವಕಾಶ

    ನವದೆಹಲಿ: ನ್ಯಾಷನಲ್ ಪೆನ್ಶನ್​ ಸ್ಕೀಮ್(ಎನ್​ಪಿಎಸ್​)​ನಲ್ಲಿ ಸಿಸ್ಟಮ್ಯಾಟಿಕ್ ಇನ್​ವೆಸ್ಟ್​ಮೆಂಟ್ ಪ್ಲ್ಯಾನ್ (ಎಸ್​ಐಪಿ) ಮೂಲಕ ಹೂಡಿಕೆ ಮಾಡುವ ಅವಕಾಶ ಶೀಘ್ರವೇ ಎನ್​ಪಿಎಸ್ ಚಂದಾದಾರರಿಗೆ ಸಿಗಲಿದೆ. ಮ್ಯೂಚುವಲ್​ ಫಂಡ್​ಗಳಲ್ಲಿನ ಎಸ್​ಐಪಿ ಮಾದರಿಯಲ್ಲೇ ಎನ್​ಪಿಎಸ್​ನಲ್ಲಿ ಮಾಡುವ ಎಸ್​ಐಪಿ ಕೆಲಸ ಮಾಡಲಿದೆ. ಎಸ್​ಐಪಿ ಎಂದರೆ, ಹೂಡಿಕೆದಾರರು ತಮ್ಮ ಬ್ಯಾಂಕ್​ನ ಖಾತೆಯಿಂದ ನಿಗದಿತ ಮೊತ್ತವನ್ನು ನಿಯತವಾದ ದಿನಾಂಕದಂದು ನಿಗದಿತ ಯೋಜನೆಯಲ್ಲಿ ಹೂಡಿಕೆಗೆ ಬಳಸಿಕೊಳ್ಳುವುದಕ್ಕೆ ಬ್ಯಾಂಕ್​ಗೆ ಅನುಮತಿ ನೀಡುವಂಥದ್ದು.

    ಎನ್​ಎಸ್​ಡಿಎಲ್​​ ಇ-ಗವರ್ನೆನ್ಸ್​ನ ಎಕ್ಸಿಕ್ಯೂಟಿವ್​ ವೈಸ್​ ಪ್ರೆಸಿಡೆಂಟ್​ ಅಮಿತ್ ಸಿನ್ಹಾ ಈ ಯೋಜನೆಯ ಸುಳಿವು ನೀಡಿದ್ದು, ಎನ್​ಪಿಎಸ್​ ಚಂದಾದಾರರಿಗೆ ಎಸ್​ಐಪಿ ಮಾದರಿಯನ್ನು ಪರಿಚಯಿಸುವ ಬಗ್ಗೆ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಎನ್​ಪಿಎಸ್​ನಲ್ಲಿ ಚಂದಾದಾರರೂ ಎಸ್​ಐಪಿ ಮೂಲಕ ಹೂಡಿಕೆ ಮಾಡುವ ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ, ಎಸ್​ಐಪಿ ಸೇವೆ ಲಭ್ಯವಾಗುವ ದಿನಾಂಕದ ಮಾಹಿತಿ ಬಹಿರಂಗಗೊಳಿಸದ ಸಿನ್ಹಾ, ಎನ್​ಪಿಎಸ್​ ಚಂದಾದಾರರಿಗೆ ಎಸ್​ಐಪಿ ಮೂಲಕ ಹೂಡಿಕೆ ಮಾಡುವ ಸೌಲಭ್ಯ ಇನ್ನು ಕೆಲವೇ ತಿಂಗಳಲ್ಲಿ ಲಭ್ಯವಾಗಲಿದೆ ಎಂದಷ್ಟೇ ಹೇಳಿದ್ದಾರೆ.

    ಇದನ್ನೂ ಓದಿ:ಇನ್ನು ಮುಂದೆ ಶನಿವಾರ, ಭಾನುವಾರ ಎರಡೂ ದಿನ ಲಾಕ್‌ಡೌನ್: ಗೋವಿಂದ ಕಾರಜೋಳ

    ಚಿಲ್ಲರೆ ಹೂಡಿಕೆದಾರರ ಪಾಲಿಗೆ ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಎಸ್​ಐಪಿ ಸೌಲಭ್ಯ ಮಹತ್ವದ್ದಾಗಿದೆ. ಅನೇಕ ಜನ ಈಗ ಫೋನ್, ವಿದ್ಯುತ್ ಬಿಲ್​ಗಳನ್ನು ಆಟೋ ಡೆಬಿಟ್ ಸೌಲಭ್ಯ ಬಳಸಿಕೊಂಡು ಪಾವತಿಸುತ್ತಿದ್ದಾರೆ. ಅದರಂತೆಯೇ ಎನ್​ಪಿಎಸ್​ನಲ್ಲೂ ಚಂದಾದಾರರು ಎಸ್​ಐಪಿ ಸೌಲಭ್ಯ ಬಳಸಿಕೊಂಡು ಹೂಡಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ಚಿಂತನೆಯಲ್ಲಿ ನಾವಿದ್ದೇವೆ ಎಂದು ಸಿನ್ಹಾ ವಿವರಿಸಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ಎನ್​ಪಿಎಸ್​ ಟೈರ್​-II ಖಾತೆಯು ಆದಾಯ ತೆರಿಗೆಯ ಸೆಕ್ಷನ್ 80 ಸಿ ಪ್ರಕಾರ ತೆರಿಗೆ ಕಡಿತದಿಂದ ವಿನಾಯಿತಿ ಹೊಂದಿರುವುದಾಗಿ ಸರ್ಕಾರ ಘೋಷಿಸಿತ್ತು. ಎನ್​ಪಿಎಸ್​ ಟೈರ್-II ಯೋಜನೆಗೆ ಲಾಕ್​ ಇನ್ ಅವಧಿ ಇಲ್ಲ. ಆದರೆ, ಸರ್ಕಾರಿ ಉದ್ಯೋಗಿಗಳು ತೆರಿಗೆ ವಿನಾಯಿತಿ ಪಡೆಯುವುದಾದರೆ ಅಂಥವುಗಳಿಗೆ ಮೂರು ವರ್ಷದ ಲಾಕ್​ ಇನ್ ಅವಧಿ ಲಾಗೂ ಆಗುತ್ತದೆ. ಖಾಸಗಿ ವಲಯದವರ ಎನ್​ಪಿಎಸ್​ ಟೈರ್​-II ಯೋಜನೆಗೆ ಯಾವುದೇ ವಿನಾಯಿತಿಯೂ ಇಲ್ಲ, ಲಾಕ್​ ಇನ್ ಅವಧಿಯೂ ಇಲ್ಲ. (ಏಜೆನ್ಸೀಸ್)

    ಬ್ಯಾಂಕ್​ನಲ್ಲಿ ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಯುವಕ ಮಾಡಿದ್ದೇನು ಗೊತ್ತಾ? ಮ್ಯಾನೇಜರ್​ ಫುಲ್​ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts