More

    ನಿಮ್ಮ ನಿವೃತ್ತಿಯನ್ನು ಫ್ರೀಡಂ ಎಸ್​ಐಪಿಯೊಂದಿಗೆ ಯೋಜಿಸಿ..

    | ಮೊಹಮ್ಮದ್ ತನ್ವೀರ್ ಅಲಂ ವೇ2ಇನ್​ವೆಸ್ಟ್​ಮೆಂಟ್​

    ನಿವೃತ್ತಿ ನಿಧಿ ನಿರ್ಮಿಸಲು ಯೋಚಿಸುತ್ತಿರುವಿರಾ? ಆಸ್ತಿ ಬೆಲೆಗಳು ಹೆಚ್ಚು ಅನಿಶ್ಚಿತತೆಯಿಂದ ಬದಲಾಗುತ್ತಿರುವ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಊಹಿಸಲು ಕಷ್ಟವಾಗುತ್ತಿರುವ ಜಗತ್ತಿನಲ್ಲಿ, ನಿವೃತ್ತಿ ಯೋಜನೆ ಕಾರ್ಯ, ನಿಷ್ಕ್ರಿಯ ಹೂಡಿಕೆಯಿಂದ ದೈನಂದಿನ ವೆಚ್ಚ ಸರಿದೂಗಿಸಲು ನಿಯಮಿತ ನಗದು ಹರಿವನ್ನು ಸೃಷ್ಟಿಸುವುದೇ ಒಂದು ಗುರುತರ ಕಾರ್ಯವಾಗುತ್ತಿದೆ.

    ಕೇಂದ್ರೀಯ ಬ್ಯಾಂಕ್‌ಗಳ ಮೆಲುದನಿಯು ಕಡಿಮೆ ಸಮಯದಲ್ಲಿ ಅರ್ಥನೀತಿ ಸಲಹೆಗಾರರಿಂದ ನೀತಿರೂಪಕರಿಗೆ ಅಥವಾ ನೀತಿರೂಪಕರಿಂದ ಸಲಹೆಗಾರರಿಗೆ ಬದಲಾಗುವುದರೊಂದಿಗೆ, ಇದು ನಿವೃತ್ತರು ಎದುರಿಸುತ್ತಿರುವ ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ. ಜಾಗತಿಕವಾಗಿ ಉದ್ಯೋಗಿಗಳು ತಮ್ಮ ನಿವೃತ್ತಿ ನಿಧಿಯನ್ನು ನಿರ್ವಹಿಸುವ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡಲು ಇದು ಒಂದು ಪ್ರಮುಖ ಕಾರಣ. ಪಿಂಚಣಿ ಪ್ರಯೋಜನಗಳ ನಿಧಿಗೆ ಸಂಬಂಧಿಸಿದ ವೆಚ್ಚ ಮತ್ತು ಅಪಾಯವು ನಿರೀಕ್ಷಿತಕ್ಕಿಂತ ಹೆಚ್ಚಾಗಿರುತ್ತದೆ ಎಂದು ಉದ್ಯೋಗದಾತರು ಅರಿತುಕೊಂಡಿದ್ದಾರೆ.

    ‘ಜೀವನ ಸುಲಭವಾಗಿ ಮತ್ತು ಪಾವತಿ ಕಷ್ಟಕರವಾಗುವುದೇ ನಿವೃತ್ತಿ’ ಎಂದು ಈ ಪರಿಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜನರು ಸಾಮಾನ್ಯವಾಗಿ ಹೇಳುತ್ತಾರೆ. ಆದ್ದರಿಂದ, ಪ್ರಸ್ತುತ ಸ್ಥಿತಿಯಲ್ಲಿ ಬಡ್ಡಿದರಗಳ ಅನಿಶ್ಚಿತತೆ ನಿಭಾಯಿಸಲು, ಸರಾಸರಿ ವಯಸ್ಸು ವಿಸ್ತರಿಸುತ್ತಿರುವಾಗ ವೈದ್ಯಕೀಯ ಚಿಕಿತ್ಸೆಗೆ ಉತ್ತಮ ಪ್ರವೇಶವಿದ್ದರೂ ಹಣದುಬ್ಬರಗಳ ಹಿನ್ನೆಲೆಯಲ್ಲಿ ನಿವೃತ್ತಿ ಯೋಜನೆಗೆ ವ್ಯಾಪಕವಾದ ಸಂಶೋಧನೆ ಮತ್ತು ಲೆಕ್ಕಾಚಾರದ ಅಗತ್ಯವಿದೆ.

    ಆದ್ದರಿಂದ ಅನಿಶ್ಚಿತತೆಗಳ ಎಲ್ಲಾ ಬದಲಾವಣೆಗಳಿಂದ ಒಬ್ಬರನ್ನು ಮುಕ್ತಗೊಳಿಸುವುದಲ್ಲದೆ, ಎಷ್ಟು ಮತ್ತು ಎಲ್ಲಿ ಉಳಿಸಬೇಕು ಎಂಬುದರ ಬಗ್ಗೆ ಕಾಳಜಿ ವಹಿಸುವ ನಿವೃತ್ತಿ ಯೋಜನೆ ಉತ್ತಮ ಪರಿಹಾರ. ನಿವೃತ್ತಿ ನಿಧಿ ನಿರ್ಮಿಸಲು ಹಲವಾರು ಮಾರ್ಗಗಳು ಮತ್ತು ವಿಧಾನಗಳಿದ್ದರೂ ಐಸಿಐಸಿಐ ಪ್ರುಡೆನ್ಷಿಯಲ್​ ಫ್ರೀಡಮ್ ಎಸ್​ಐಪಿ ವೈಶಿಷ್ಟ್ಯದ ಮೂಲಕ ಅತ್ಯಂತ ನವೀನ, ಇನ್ನೂ ಸರಳವಾದ ಸಾಧನವಾಗಿದೆ. ಈ ವೈಶಿಷ್ಟ್ಯಗಳು ಹೂಡಿಕೆದಾರರ ಜೀವನದ ಸೂರ್ಯಾಸ್ತದ ವರ್ಷಗಳಲ್ಲಿ ಹೂಡಿಕೆ ಮಾಡಲು, ಸಂಗ್ರಹಿಸಲು ಮತ್ತು ನಿಷ್ಕ್ರಿಯ ಆದಾಯವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ.

    ಈ ಎಸ್​ಐಪಿಯಲ್ಲಿ ಎರಡು ವಿಧ. ಒಂದು, ಹೂಡಿಕೆದಾರರು ಕನಿಷ್ಠ ಎಂಟು ವರ್ಷಗಳವರೆಗೆ ಮತ್ತು ಗರಿಷ್ಠ 15 ವರ್ಷಗಳವರೆಗೆ ಮಾಸಿಕ ಎಸ್​ಐಪಿ ಮೂಲಕ ಮೂಲನಿಧಿಗಳಲ್ಲಿ (ಮೇಲಾಗಿ ಈಕ್ವಿಟಿ ಫಂಡ್) ಹೂಡಿಕೆ ಮಾಡುತ್ತಾರೆ. ಒಬ್ಬ ವ್ಯಕ್ತಿಯು ಸಂಪರ್ಕಿಸಿದಾಗ ಅಥವಾ ಆತನ ನಿವೃತ್ತಿಯ ಮೇಲೆ ಎಸ್​​ಐಪಿ ಮೂಲಕ ನಿರ್ಮಿಸಲಾದ ನಿಧಿಯನ್ನು ಗುರಿ ಯೋಜನೆ (ಸಾಮಾನ್ಯವಾಗಿ ಸಾಲ ನಿಧಿ ಅಥವಾ ಹೈಬ್ರಿಡ್ ಯೋಜನೆ)ಗೆ ಬದಲಾಯಿಸಲಾಗುತ್ತದೆ. ಒಬ್ಬರ ಅವಶ್ಯಕತೆ ಮತ್ತು ರಿಸ್ಕ್​ ತೆಗೆದುಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ ಸೂಕ್ತವಾದ ಸಂಯೋಜನೆಗಳನ್ನು ಮಾಡಲು ಫ್ರೀಡಮ್ ಎಸ್​ಐಪಿ ಸಹಾಯ ಮಾಡುತ್ತದೆ.

    ಅಂತಿಮವಾಗಿ ತೀರ್ಮಾನಿಸುವುದೇನೆಂದರೆ, ನಿಮ್ಮ ನಿವೃತ್ತಿ ನಿಧಿಯನ್ನು ನಿರ್ಮಿಸುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನಿಮ್ಮ ಪ್ರಯಾಣವನ್ನು ಸುಲಭ ಹಾಗೂ ಪರಿಣಾಮಕಾರಿಗೊಳಿಸಬೇಕಿದ್ದರೆ ಫ್ರೀಡಮ್ ಎಸ್​​ಐಪಿಯಂಥ ವೈಶಿಷ್ಟ್ಯಗಳನ್ನು ಬಳಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts