ಎರಡನೇ ಹೆಂಡ್ತಿ ಜತೆ ಸೇರಿ ಮಗಳನ್ನೆ ಸುಟ್ಟು ಕೊಂದು ಕಥೆ ಕಟ್ಟಿದ!

murder1
Published on

ಇಜ್ಜತ್​ಪುರ: ವ್ಯಕ್ತಿಯೊಬ್ಬ ಎರಡನೇ ಹೆಂಡತಿಯೊಂದಿಗೆ ಸೇರಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳನ್ನು ಕೊಂದು ತನ್ನ ಮನೆಯಲ್ಲಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆಲೋಕ್ ನಗರ ನಿವಾಸಿ ರವಿ ಬಾಬು ಸುಮಾರು ಎರಡು ವರ್ಷಗಳ ಹಿಂದೆ ಮೊದಲ ಹೆಂಡತಿ ಮೃತಳಾದ ನಂತರ ರೀತು ಎಂಬಾಕೆಯನ್ನು ವಿವಾಹವಾದ.

ಗುರುವಾರ ಕಾಜಲ್ (7)ಳನ್ನು ಕೊಲೆ ಮಾಡಿ ಮನೆಯಲ್ಲೇ ಶವವನ್ನು ಸುಟ್ಟಿದ್ದಾರೆ.

ನೆರೆಹೊರೆಯವರು ಮಾಹಿತಿ ನೀಡಿದ ನಂತರ ಪೊಲೀಸರು ಮನೆಗೆ ತಲುಪಿದಾಗ, ಅವರಿಬ್ಬರೂ ತಮ್ಮ ಸಾಕು ಪ್ರಾಣಿ ನಾಯಿ ಮೃತಪಟ್ಟಿದೆ ಎಂದು ಹೇಳಿದ್ದಾರೆ. ಆದರೆ ಕೆಲವು ಮಕ್ಕಳು ಕಾಜಲ್ ಮೃತಪಟ್ಟಿದ್ದಾಗಿ ಮಾಹಿತಿ ನೀಡಿದರು ಎಂದು ಠಾಣಾಧಿಕಾರಿ ಕೆ. ಕೆ. ವರ್ಮಾ ಹೇಳಿದರು. ಶುಕ್ರವಾರ ಆ ಬಾಲಕಿಯ ಸಹೋದರ ಸಂಬಂಧಿ ಸೂರಜ್ ಎಂಬಾತ ತನ್ನ ಸಹೋದರಿ ಕೊಲೆಯಾಗಿರುವುದಾಗಿ ದೂರು ದಾಖಲಿಸಿದ.

ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಭಾನುವಾರ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಕಾಣೆಯಾದ ಕಾಜಲ್ ಳ ಅಕ್ಕ ಇನ್ನೂ ಪತ್ತೆಯಾಗಿಲ್ಲ.

ರವಿ ಮತ್ತು ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net