PHOTO | ಐಪಿಎಲ್‌ಗೆ ಮುನ್ನ ಎಂಗೇಜ್ ಆದ ಕ್ರಿಕೆಟಿಗ ವಿಜಯ್ ಶಂಕರ್

Vijay-Shankar-and-Vaishali
Published on

ಚೆನ್ನೈ: ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೆನ್ನಲ್ಲೇ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಕೂಡ ಐಪಿಎಲ್ ಟೂರ್ನಿಗೆ ಮುನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಶಾಲಿ ವಿಶ್ವೇಶ್ವರನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ವಿಜಯ್ ಶಂಕರ್ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದ ವಿಜಯ್ ಶಂಕರ್ ನಿಶ್ಚಿತಾರ್ಥದ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಅವರ ಸಹ-ಆಟಗಾರರಿಂದ ಶುಭಾಶಯಗಳ ಸುರಿಮಳೆಯಾಗಿದೆ.

29 ವರ್ಷದ ವಿಜಯ್ ಶಂಕರ್ ಭಾರತ ಪರ ಇದುವರೆಗೆ 12 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಅವರು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಡಲಿದ್ದು, ಈಗಾಗಲೆ ತಂಡದ ಜತೆಗೆ ಯುಎಇಗೆ ತೆರಳಿದ್ದಾರೆ.

ವೈಶಾಲಿ ವಿಶ್ವೇಶ್ವರನ್ ಅವರು ಚೆನ್ನೈನಲ್ಲಿ ಅರೆಕಾಲಿಕ ಪ್ರಾಧ್ಯಾಪಕಿಯಾಗಿದ್ದಾರೆ. ನನ್ನ ಮಗನಂತೆಯೇ ವೈಶಾಲಿ ಕೂಡ ಸರಳವಾದಳು. ಇದು ಪ್ರೇಮ ವಿವಾಹವಲ್ಲ. ಕುಟುಂಬದವರು ಹುಡುಗಿಯನ್ನು ಹುಡುಕಿ, ಜಾತಕಗಳನ್ನು ನೋಡಿ ಮದುವೆ ಮಾಡಿಸುತ್ತಿದ್ದೇವೆ ಎಂದು ವಿಜಯ್ ಶಂಕರ್ ತಂದೆ ತಿಳಿಸಿದ್ದಾರೆ. ಸರಳವಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ 40 ಅತಿಥಿಗಳಷ್ಟೇ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net