PHOTO | ಟೆನಿಸ್ ಆಟಗಾರ್ತಿಯನ್ನು ವಿವಾಹವಾದ ಕ್ರಿಕೆಟಿಗ

cricket tennis
Published on

ಮುಂಬೈ: ಮಹಾರಾಷ್ಟ್ರ ಕ್ರಿಕೆಟ್ ತಂಡದ ಆಟಗಾರ ಸ್ವಪ್ನಿಲ್ ಗುಗಲೆ ಟೆನಿಸ್ ಆಟಗಾರ್ತಿ ರುತುಜಾ ಬೋಸಲೆ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ. ಕರೊನಾ ಹಾವಳಿಯಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿರುವ ನಡುವೆ ಸ್ವಪ್ನಿಲ್ ಮತ್ತು ರುತುಜಾ ವೈಯಕ್ತಿಕ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಆರು ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದ ಸ್ವಪ್ನಿಲ್ ಮತ್ತು ರುತುಜಾ ಬಳಿಕ ಪ್ರೀತಿಸಲಾರಂಭಿಸಿದ್ದರು. ಬಳಿಕ ಕುಟುಂಬದ ಒಪ್ಪಿಗೆ ಪಡೆದು ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.

29 ವರ್ಷದ ಸ್ವಪ್ನಿಲ್ ಗುಗಲೆ ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಪರ 37 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 4 ಶತಕಗಳ ಸಹಿತ 2,109 ರನ್ ಗಳಿಸಿದ್ದಾರೆ. ಅಜೇಯ 351 ರನ್ ಅವರ ಜೀವನಶ್ರೇಷ್ಠ ಗಳಿಕೆಯಾಗಿದೆ. ರುತುಜಾ ಅವರು ಭಾರತದ ನಂ. 3 ಸಿಂಗಲ್ಸ್ ಆಟಗಾರ್ತಿಯಾಗಿದ್ದು, ವರ್ಷಾರಂಭದಲ್ಲಿ ಭಾರತ ೆಡ್ ಕಪ್ ವಿಶ್ವಗುಂಪಿಗೇರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಪೊಲೀಸ್ ಅಧಿಕಾರಿಯ ಪುತ್ರಿಯಾಗಿರು ರುತುಜಾ ಬೋಸಲೆ, ಹಾಲಿ ಪರಿಸ್ಥಿತಿಯಲ್ಲಿ ಇಬ್ಬರು ಕೂಡ ಸಾಕಷ್ಟು ಬಿಡುವು ಹೊಂದಿದ್ದೇವೆ. ಅಲ್ಲದೆ ಕ್ರೀಡಾ ಸವಾಲು ಮತ್ತೆ ಶುರುವಾಗಲು ಕೆಲಕಾಲ ಹಿಡಿಯಲಿದೆ. ಹೀಗಾಗಿ ವಿವಾಹವಾಗಲು ತೀರ್ಮಾನಿಸಿದೆವು ಎಂದಿದ್ದಾರೆ. ರುತುಜಾ ಬೋಸಲೆ ಅವರು ಈಗ ವಿವಾಹ ಸಮಾರಂಭದ ವಿವಿಧ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net