ಧರ್ಮೇಂದ್ರ ಚಿತ್ರರಂಗಕ್ಕೆ ಬರುವ ಮುನ್ನವೇ 1954ರಲ್ಲಿ ಅರ್ಥಾತ್ ತಮ್ಮ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಜತೆ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಇಬ್ಬರು ಗಂಡು (ಸನ್ನಿ ಡಿಯೋಲ್, ಬಾಬಿ ಡಿಯೋಲ್) ಮತ್ತು ಇಬ್ಬರು ಹೆಣ್ಣು (ಅಜೀತಾ, ವಿಜೇತಾ) ಸೇರಿ ನಾಲ್ವರು ಮಕ್ಕಳು. ಆದರೆ, 1970ರಲ್ಲಿ "ತೂ ಹಸೀನ್ ಮೈ ಜವಾನ್' ಚಿತ್ರದಲ್ಲಿ ಮೊದಲ ಬಾರಿಗೆ ಹೇಮಾ ಮಾಲಿನಿ ಜತೆ ಕೆಲಸ ಮಾಡಿದ ಧರ್ಮೇಂದ್ರ, ಮೊದಲ ನೋಟದಲ್ಲೇ "ಡ್ರೀಮ್ ಗರ್ಲ್'ಗೆ ಮನಸೋತಿದ್ದರು. ಬಳಿಕ "ಶರಾತ್', "ಶೋಲೇ', "ಸೀತಾ ಔರ್ ಗೀತಾ', "ದಿಲ್ಲಗಿ' ಸೇರಿ 28 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಇಬ್ಬರ ನಡುವಿನ ಒಡನಾಟ ಗಾಢವಾಗಿ, 1980ರಲ್ಲಿ ಧರ್ಮೇಂದ್ರ ತಮ್ಮ 45ನೇ ವಯಸ್ಸಿನಲ್ಲಿ ಹೇಮಾ ಮಾಲಿನಿ ಜತೆ ಮತ್ತೊಮ್ಮೆ ಮದುವೆಯಾದರು.