

ಬಳ್ಳಾರಿ: 2008ರಲ್ಲಿ ಎಲ್ಲರೂ ಸೇರಿಕೊಂಡ ನನ್ನನ್ನು ದಾರಿ ತಪ್ಪಿಸಿದರು. ನೆನಪಿರಲಿ, 2028ರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನರೇ ತಿರಸ್ಕಾರ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅವರು ಬಳ್ಳಾರಿ ಜಿಲ್ಲೆಯ ಕುರೆಕೊಪ್ಪ ಗ್ರಾಮದಲ್ಲಿ ಮಾತನಾಡುತ್ತಾ, ನನಗೆ ಎರಡೂ ಪಕ್ಷದ ಜತೆಗೆ ಸಮ್ಮಿಶ್ರ ಸರಕಾರ ನಡೆಸಿ ಅನುಭವ ಇದೆ. ಸಮ್ಮಿಶ್ರ ಸರಕಾರದ ಆಡಳಿತದಿಂದ ಬಡತನ ಹೋಗಲಾಡಿಸಲು ಸಾಧ್ಯವಿಲ್ಲ. 2018ರಲ್ಲಿ ಕಾಂಗ್ರೆಸ್ ಜತೆಗೆ ಸಮ್ಮಿಶ್ರ ಸರಕಾರವೆಂದು ಹೋದಾಗ ನನ್ನನ್ನು ಗುಲಾಮನಂತೆ ನಡೆಸಿಕೊಂಡರು ಎಂದು ಹೇಳಿದರು.
ಬಳ್ಳಾರಿಯಲ್ಲಷ್ಟೇ ಅಲ್ಲ, ಎಲ್ಲಾ ಇಲ್ಲೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ರಾಷ್ಟ್ರೀಯ ಪಕ್ಷಗಳು ಹೈಜಾಕ್ ಮಾಡುತ್ತಾರೆ. ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ. 2018ರಲ್ಲಿ ಷರತ್ತು ಹಾಕು ಕಾಂಗ್ರೆಸ್ ನನಗೆ ಅಧಿಕಾರ ವಹಿಸಿತು. ಸ್ವತಂತ್ರವಾಗಿ ನನಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಮಾಡಿ ಕಾಂಗ್ರೆಸ್ನವರು ಕುತ್ತಿಗೆ ಕೊಯ್ದರು. ಕಾಂಗ್ರೆಸ್ ಬೆಂಬಲ ಕೊಡದೇ ನಿಖಿಲ್ ಕುಮಾರಸ್ವಾಮಿ ಸೋತರು. ಅಂದು ದೇವೇಗೌಡರು ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಎಲ್ಲಾ ಪಕ್ಷಕ್ಕೂ ಅಸ್ತಿತ್ವ ಕೊಟ್ಟಿದ್ದರು. ಮುಖ್ಯಮಂತ್ರಿ ಆಗಲೆಂದೇ ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋಗಿರುವುದು ಎಂದು ಟೀಕಿಸಿದರು.