ಕಾಡು ಹಂದಿ ಮಾಂಸವೆಂದು ನಂಬಿಸಿ ನಾಯಿ ಮಾಂಸ ಮಾರಾಟ; ಯುವಕರಿಬ್ಬರಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು!

ಮಾಂಸ ಮಾರಾಟ
Published on

ಉತ್ತರಕನ್ನಡ: ಕಾಡು ಹಂದಿ ಮಾಂಸ ಎಂದು ನಂಬಿಸಿ, ನಾಯಿ ಮತ್ತು ಊರ ಹಂದಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರಿಗೆ ಜನರು ಧರ್ಮದೇಟು ನೀಡಿದ್ದಾರೆ. ಈ ಘಟನೆ ಅಂಕೋಲಾ ತಾಲೂಕಿನ ಮೊಗಟಾ, ಹಿಲ್ಲೂರು ಗ್ರಾಮೀಣ ಭಾಗದಲ್ಲಿ ನಡೆದಿದೆ.

ಯುವಕರು ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು. ಕಾಡು ಹಂದಿ ಮಾಂಸ ಎಂದು ನಂಬಿಸಿ ನಾಯಿ ಮತ್ತು ಊರ ಹಂದಿ ಮಾಂಸ ಮಾರಾಟ ಮಾಡುತ್ತಿದ್ದರು. ಯುವಕರಿಬ್ಬರು ನಾಯಿ ಹಿಡಿಯುವುದನ್ನು ಊರ ಗ್ರಾಮಸ್ಥರು ನೋಡಿದ್ದಾರೆ. ಅನುಮಾನ ಬಂದು ಕೂಡಲೇ ಇಬ್ಬರನ್ನು ಪ್ರಶ್ನಿಸಿದ್ದಾರೆ.

ಗ್ರಾಮಸ್ಥರು ಪ್ರಶ್ನಿಸುತ್ತಿದ್ದಂತೆ ಯುವಕರಿಬ್ಬರು ಸರಿಯಾದ ಉತ್ತರ ಕೊಡುವಲ್ಲಿ ಎಡವಿದ್ದಾರೆ. ಕೊನೆಯಲ್ಲಿ ಸತ್ಯ ತಿಳಿದು ಇಬ್ಬರು ಯುವಕರಿಗೆ ನಾಗರಿಕರು ಧರ್ಮದೇಟು ನೀಡಿದ್ದಾರೆ. ಇದರಿಂದಾಗಿ ನಾಯಿ ಹಾಗೂ ಊರ ಹಂದಿ ಮಾಂಸ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.

ತರಾಟೆಗೆ ತೆಗೆದುಕೊಂಡು, ಥಳಿಸಿದ ಗ್ರಾಮಸ್ಥರು ನಂತರ ಯುವಕರನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net