ರಾಜೀನಾಮೆ ನಂತ್ರ ಎಚ್‌ಡಿಎಫ್‌ಸಿ ಮಾಜಿ ಅಧ್ಯಕ್ಷ ದೀಪಕ್ ಪಾರೇಖ್ ಮೊದಲ ಸ್ಯಾಲರಿ ಮಾಹಿತಿ ವೈರಲ್‌!

hdfc
Published on

ನವದೆಹಲಿ: ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೇಖ್ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ಅವರು ಪಡೆದಿರುವ ಆಫರ್ ಲೆಟರ್ ಮತ್ತು ಮೊದಲ ಸಂಬಳದ ವಿವರಗಳು ವೈರಲ್ ಆಗುತ್ತಿವೆ.

ದೀಪಕ್ ಪರೇಖ್  ಅವರು ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಸ್ಥೆಗೆ ಅಮೂಲ್ಯ ಸೇವೆ ಸಲ್ಲಿಸಿರುವ ದೀಪಕ್ ಪಾರೇಖ್ ಅವರ ರಾಜೀನಾಮೆ ನಂತರ ಮೊದಲ ಆಫರ್ ಲೆಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಜತೆ ಎಚ್‌ಡಿಎಫ್‌ಸಿ ಲಿಮಿಟೆಡ್‌ ವಿಲೀನವಾಗಿದೆ. ಈ ಮೊದಲು ಎಚ್‌ಡಿಎಫ್‌ಸಿ ಅಧ್ಯಕ್ಷರಾಗಿದ್ದ ದೀಪಕ್ ಪಾರೇಖ್ ರಾಜೀನಾಮೆ ನೀಡಿ ನೌಕರರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಈ ಹಿನ್ನಲೆಯಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್​​​ ಪಾರೇಖ್ ಅವರಿಗೆ ನೀಡಿದ್ದ ಮೊದಲ ಆಫರ್ ಲೆಟರ್ ಎಂಬ ಪೋಸ್ಟ್ ವೈರಲ್ ಆಗುತ್ತಿದೆ.

ಇದು 1978 ಜುಲೈ 19ರ ದಿನಾಂಕವೆಂದು ತೋರುತ್ತದೆ. ಇದು ಪಾರೇಖ್ ಅವರ ಸಂಬಳ ಮತ್ತು ಭತ್ಯೆಗಳ ವಿವರಗಳನ್ನು ಒಳಗೊಂಡಿದೆ. ಅಂದು ಡೆಪ್ಯುಟಿ ಮ್ಯಾನೇಜರ್ ಆಗಿ ನೇಮಕಗೊಂಡಿದ್ದ ಪಾರೇಖ್ ಅವರಿಗೆ 3,500ರೂ. ವೇತನ ಹಾಗೂ ರೂ.500 ಭತ್ಯೆ ನೀಡಲಾಗಿತ್ತು. 45 ವರ್ಷಗಳ ಹಳೆಯ ಪತ್ರವು 15 ಪ್ರತಿಶತದಷ್ಟು ವಸತಿ ಬಾಡಿಗೆ ಭತ್ಯೆ ಮತ್ತು 10 ಪ್ರತಿಶತದಷ್ಟು ನಗರ ಪರಿಹಾರ ಭತ್ಯೆಯನ್ನು ಒಳಗೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸಿದ ವಯೋಮಿತಿಯಿಂದಾಗಿ 45 ವರ್ಷಗಳ ಕಾಲ ಎಚ್‌ಡಿಎಫ್‌ಸಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಪಾರೇಖ್ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಅವರ ನಾಯಕತ್ವದಲ್ಲಿ, ಎಚ್‌ಡಿಎಫ್‌ಸಿ ಒಂಬತ್ತು ದಶಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಗೃಹ ಸಾಲವನ್ನು ಒದಗಿಸಿದೆ. ವಿಲೀನವು ಜುಲೈ 1 ರಿಂದ ಜಾರಿಗೆ ಬಂದಿದೆ. HDFC ತನ್ನ ಮಾತೃಸಂಸ್ಥೆಯಾದ ಭಾರತದ ಮೊದಲ ಗೃಹ ಹಣಕಾಸು ಕಂಪನಿ - HDFC ಅನ್ನು ವಿಲೀನಗೊಳಿಸಿದ ನಂತರ ವಿಶ್ವದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net