ಅಂದು HDK ಇಲ್ಲದೇ ಹೋಗಿದ್ರೆ GTD ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು: HD Revanna

HD Revanna
Published on

ಬೆಂಗಳೂರು: 2017ರಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ಜಿ.ಟಿ. ದೇವೇಗೌಡ ಮತ್ತು ಅವರ ಮಗನನ್ನು ಕುತಂತ್ರ ಮಾಡಿ ಅವರನ್ನು ಬಂಧಿಸಲು ಮುಂದಾಗಿತ್ತು. ಅಂದಿನ ದಿನ ಕುಮಾರಸ್ವಾಮಿ ಇಲ್ಲದೇ ಹೋಗಿದ್ದರೆ ಜಿ.ಟಿ. ದೇವೇಗೌಡ ಮತ್ತು ಅವರ ಮಗ ಜೈಲಿನಲ್ಲಿರಬೇಕಿತ್ತು ಎಂದು ಹೇಳುವ ಮೂಲಕ ಜೆಡಿಎಸ್​ ಶಾಸಕ ಎಚ್​.ಡಿ. ರೇವಣ್ಣ (HD Revanna) ಹೊಸ ಬಾಂಬ್​ ಒಂದನ್ನು ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್​.ಡಿ. ರೇವಣ್ಣ (HD Revanna), 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ನಾನು ಈ ವಿಚಾರವನ್ನು ಕುಮಾರಸ್ವಾಮಿ (HD Kumaraswamy) ಅವರ ಗಮನಕ್ಕೆ ತಂದೆ.

ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ

ಕುಮಾರಸ್ವಾಮಿ (HD kumaraswamy) ಪೊಲೀಸರಿಗೆ ಫೋನ್ ಮೂಲಕ ಗುಟರು ಹಾಕಿದ್ರು. ಕುಮಾರಸ್ವಾಮಿಯವರ ಒಂದೇ ಒಂದು ಗುಟರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡಲಿಲ್ಲ. ಇಲ್ಲದಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು. ಅದು ಯಾವ ಕೇಸ್​ನಲ್ಲಿ ಅಂತ ಈಗಿರುವ ಸರ್ಕಾರದಲ್ಲಿರುವ ನಾಯಕರನ್ನ ಕೇಳಿ ಎಂದು ಆರೋಪಿಸಿದ್ದಾರೆ.

ಜೆಡಿಎಸ್​ ಶಾಸಕರು ಕಾಂಗ್ರೆಸ್​ಗೆ ಹೋಗುವ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್ ಶಾಸಕರನ್ನು ಕೊಂಡುಕೊಳ್ಳುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಈ ಹಿಂದೆ ಒಂದು ಪಕ್ಷದ ನಾಯಕರೊಬ್ಬರು ತಮ್ಮ ಪಕ್ಷಕ್ಕೆ ಆಹ್ವಾನಿಸಿ ನೀವು ಡಿಸಿಎಂ ಆಗಿ, ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದರು. ಆದರೆ, ನಾನು ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ. ಅಧಿಕಾರದ ಲಾಲಸೆ ಇದ್ದಿದ್ದರೆ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಮಾಜಿ ಸಚಿವ ಎಚ್​.ಡಿ. ರೇವಣ್ಣ (HD Revanna) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net